Advertisement

ಬಸ್ಸಲ್ಲೇ ಬಿಯರ್‌ ಕುಡಿದ ವಿದ್ಯಾರ್ಥಿನಿಯರು

09:11 PM Mar 24, 2022 | Team Udayavani |

ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿನಿಯರು ಬಸ್ಸಿನಲ್ಲೇ ಬಿಯರ್‌ ಕುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಚೆಂಗಲ್ಪಟ್ಟು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಈ ರೀತಿ ವರ್ತಿಸಿರುವುದಾಗಿ ಹೇಳಲಾಗಿದೆ. ಮಂಗಳವಾರ ತಿರುಕಝಕುಂದ್ರಂನಿಂದ ಥಾಚೂರಿಗೆ ತೆರಳುತ್ತಿದ್ದ ಬಸ್ಸನ್ನು ಹತ್ತಿದ ವಿದ್ಯಾರ್ಥಿನಿಯರು, ಬ್ಯಾಗಿನಿಂದ ಬಿಯರ್‌ ಬಾಟೆಲ್‌ ಒಂದನ್ನು ತೆಗೆದು ಕುಡಿಯಲಾರಂಭಿಸಿದ್ದಾರೆ. ಈ ದೃಶ್ಯವನ್ನು ವಿದ್ಯಾರ್ಥಿಯೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾನೆ.

ಮಂಗಳವಾರ ರಾತ್ರಿಯೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. “ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಮುಗಿದ ನಂತರ ನಾವು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಚೆಂಗಲ್ಪಟ್ಟು ಜಿಲ್ಲೆಯ ಶಿಕ್ಷಣಾಧಿಕಾರಿ ರೋಸ್‌ ನಿರ್ಮಲಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next