ಗುವಾಹಟಿ : ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಶಾಲೆಯ ಆವರಣದಲ್ಲಿ ಮಚ್ಚು ಹಿಡಿದುಕೊಂಡು ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸಿಕೊಂಡ ಶಿಕ್ಷಕನ ಹೆಸರು ಧೃತಿಮೇಧ ದಾಸ್ ( 38 ವರ್ಷ) ಎಂದು ಗುರುತಿಸಲಾಗಿದ್ದು, ಶಾಲೆಯ ಸಹ ಶಿಕ್ಷಕರೇ ಪೊಲೀಸರಿಗೆ ಮಾಹಿತಿ ನೀಡಿದ್ದು ಇದೀಗ ಮುಖ್ಯ ಶಿಕ್ಷಕ ಪೊಲೀಸರ ಅತಿಥಿಯಾಗಿದ್ದಾರೆ.
ಧೃತಿಮೇಧ ದಾಸ್ ಅವರು ಸಿಲ್ಚಾರ್‌ನ ತಾರಾಪುರ ಪ್ರದೇಶದವರಾಗಿದ್ದು, 11 ವರ್ಷಗಳಿಂದ ರಾಧಾಮಧಾಬ್ ಮೂಲ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಪೊಲೀಸರ ವಶದಲ್ಲಿರುವ ಮುಖ್ಯ ಶಿಕ್ಷಕ ದಾಸ್ ಹೇಳಿಕೆಯಂತೆ ತನ್ನ ಶಾಲೆಯ ಸಹ ಶಿಕ್ಷಕರು ಶಾಲೆಗಳಲ್ಲಿ ನಡೆಸುತ್ತಿರುವ ಅಕ್ರಮಗಳಿಂದ ಬೇಸತ್ತು ಶಿಕ್ಷಕರಿಗೆ ಹೆದರಿಸುವ ಸಲುವಾಗಿ ಕೈಯಲ್ಲಿ ಮಚ್ಚು ಹಿಡಿದು ತಿರುಗಾಡುತ್ತಿದ್ದೆ ಎಂದು ಹೇಳಿದ್ದಾರೆ.
Related Articles
ಸದ್ಯ ಶಾಲೆಯ ಮುಖ್ಯ ಶಿಕ್ಷಕನನ್ನು ಕರ್ತವ್ಯದಿಂದ ವಜಾಗೊಳಿಸಿದ್ದು ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ.