Advertisement

ಕರ್ವಾ ಚೌತ್ ಗೆ ಪ್ರೇಯಸಿ ಜತೆ ಶಾಪಿಂಗ್…ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ..ಮುಂದೇನಾಯ್ತು

11:37 AM Oct 14, 2022 | Team Udayavani |

ನವದೆಹಲಿ: ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಗಾದೆಯಂತೆ ಕರ್ವಾ ಚೌತ್ ದಿನದಂದು ಪತಿ ಮಹಾಶಯ ಪ್ರೇಯಸಿಯೊಂದಿಗೆ ಶಾಪಿಂಗ್ ಮಾಡುತ್ತಿದ್ದಾಗಲೇ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಗಾಜಿಯಾಬಾದ್ ನ ಜನನಿಬಿಢ ಮಾರ್ಕೆಟ್ ಪ್ರದೇಶದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಮಾಸ್ಕೋದಿಂದ ದಿಲ್ಲಿಗೆ ಬಂದ ವಿಮಾನದಲ್ಲಿ ಬಾಂಬ್ ಬೆದರಿಕೆ; ಏರ್ಪೋರ್ಟ್ ನಲ್ಲಿ ಬಿಗು ಭದ್ರತೆ

ಉತ್ತರ ಭಾರತದಲ್ಲಿ ಕರ್ವಾ ಚೌತ್ ವಿವಾಹಿತ ಮಹಿಳೆಯರ ಪಾಲಿಗೆ ವಿಶೇಷವಾದ ಹಬ್ಬವಾಗಿದೆ. ಕರ್ವಾ ಚೌತ್ ದಿನದಂದೇ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ನಿ ಹಾಗೂ ಆಕೆಯ ಕೆಲವು ಸ್ನೇಹಿತೆಯರು ಆಕೆ ಪತಿಯ ಕಾಲರ್ ಪಟ್ಟಿ ಹಿಡಿದು ಜನನಿಬಿಢ ಪ್ರದೇಶದಲ್ಲಿ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಪತಿಯ ಪ್ರೇಯಸಿ ಹೊಡೆತದಿಂದ ಆತನನ್ನು ರಕ್ಷಿಸಲು ಬಂದಾಗ ಆಕೆಯನ್ನೂ ತಳ್ಳಿ ಎಳೆದಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Advertisement

ಶಾಪಿಂಗ್ ಮಾಲ್ ನಲ್ಲಿ ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ ಮಾಲೀಕ, ಹೊರಗೆ, ಹೊರಗೆ ಹೋಗಿ ಗಲಾಟೆ ಮಾಡಿ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next