Advertisement

Viral Video: ಬೈಕ್‌ನಲ್ಲಿ ಪಟಾಕಿ ಇಟ್ಟು ವೀಲ್ಹಿಂಗ್;‌ ಪುಂಡಾಟ ಮೆರೆದಾತ ಅರೆಸ್ಟ್

12:20 PM Nov 14, 2023 | Team Udayavani |

ಚೆನ್ನೈ: ಚಲಿಸುತ್ತಿರುವ ಬೈಕ್‌ನಲ್ಲಿ ಪಟಾಕಿ ಇಟ್ಟು ವೀಲ್ಹಿಂಗ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಟ್ರಾಫಿಕ್‌ ನಿಯಮ ಉಲ್ಲಂಘಿಸಿ ಪುಂಡಾಟ ಮೆರೆದಾತನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡಿನ ತಿರುಚ್ಚಿನಲ್ಲಿ ಈ ಘಟನೆ ನಡೆದಿದೆ.

ರಾತ್ರಿಯ ವೇಳೆ ಯುವಕನೊಬ್ಬ ನಡುರಸ್ತೆಯಲ್ಲಿ ಬೈಕ್‌ ನಲ್ಲಿ ವೀಲ್ಹಿಂಗ್ ಮಾಡಿದ್ದಾನೆ. ಬೈಕ್‌ ಮುಂಭಾಗದಲ್ಲಿ ಪಟಾಕಿಯನ್ನಿಟ್ಟುಕೊಂಡು ವೇಗವಾಗಿ ಬೈಕ್‌ ಓಡಿಸುತ್ತಾ  ವೀಲ್ಹಿಂಗ್‌  ಮಾಡಿದ್ದಾನೆ.

ನ.9 ರಂದು ʼಡೆವಿಲ್‌ ರೈಡರ್‌ʼ ಎನ್ನುವ ಪೇಜ್‌ ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ವಿಡಿಯೋ ಪರಿಶೀಲಿಸಿದ್ದಾರೆ.

ಈ ಬಗ್ಗೆ ಪೊಲೀಸರು ಸವಾರನ ವಿರುದ್ಧ ಸೆಕ್ಷನ್ 279 (ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಸವಾರಿ), 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಮತ್ತು 336 (ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

Advertisement

ಕಾರಿನಲ್ಲಿ ಪಟಾಕಿ ಇಟ್ಟು ಸಿಡಿಸುವ ವಿಡಿಯೋ ಕೂಡ ವೈರಲ್‌ ಆಗಿದೆ. ಇದು ಕೂಡ ತಮಿಳುನಾಡಿನಲ್ಲಿ ನಡೆದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next