ಉತ್ತರಪ್ರದೇಶ: ಮದುವೆ ಮೆರವಣಿಗೆಯ ಸಂಭ್ರಮದಲ್ಲಿ ಕಾರಿನ ಒಳಗೆ ನಿಂತು ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟು ಹೋದ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ
ಸಹರಾನ್ಪುರದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಂಡೇವಾಡ ಗ್ರಾಮದಲ್ಲಿ ಕಳೆದ ಶುಕ್ರವಾರ(ನ.22) ರಂದು ಘಟನೆ ನಡೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ಅಸಲಿಗೆ ಮದುವೆಯ ಮೆರವಣಿಗೆ ನಡೆಯುತ್ತಿತ್ತು ಈ ವೇಳೆ ಮೆರವಣಿಗೆಯಲ್ಲಿ ಬಂದ ಯುವಕರ ತಂಡದ ಸದಸ್ಯನೋರ್ವ ಕಾರಿನ ಸನ್ರೂಫ್ ಮೂಲಕ ನಿಂತು ಸ್ಕೈ ಶಾಟ್ ಸಿಡಿಸಿದ್ದಾನೆ ಈ ವೇಳೆ ಪಟಾಕಿ ಕಿಡಿ ಯುವನ ಕೈಗೆ ತಾಗುತ್ತಿದ್ದಂತೆ ಕೈಯಲ್ಲಿದ್ದ ಸ್ಕೈ ಶಾಟ್ ನ ಪೆಟ್ಟಿಗೆಯನ್ನು ಬಿಟ್ಟು ಬಿಟ್ಟಿದ್ದು ಅದು ಕಾರಿನ ಒಳಗೆ ಬಿದ್ದು ಕಾರಿನ ಒಳಗೆ ಸಿಡಿಯಲು ಆರಂಭಿಸಿದೆ. ಈ ವೇಳೆ ಕಾರಿನ ಒಳಗಿದ್ದ ಯುವಕರು ಹೊರ ಓಡಿ ಬಂದಿದ್ದಾರೆ ಆದರೆ ಪಟಾಕಿ ಮಾತ್ರ ಸಿಡಿಯುತ್ತಲೇ ಇತ್ತು ಅಲ್ಲಿದ್ದ ಯುವಕರು ಏನೂ ಮಾಡಲಾರದೇ ಓಡಾಡುತ್ತಿರುವುದು ಕಂಡು ಬಂದಿದೆ.
ಮಾಹಿತಿ ಪ್ರಕಾರ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು ಕಾರಿನ ಸೀಟು ಸೇರಿ ಒಳ ಭಾಗ ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದ್ದು ಇನ್ನು ಪ್ರಕರಣ ದಾಖಲಿಸಕೊಂಡ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡು ಕೃತ್ಯ ಎಸಗಿದ ಯುವಕರಿಗೆ ದಂಡ ವಿಧಿಸಿದ್ದಾರೆ.