ನವದೆಹಲಿ: ಇತ್ತೀಚೆಗೆ ದುಬೈನಲ್ಲಿ ನಡೆದ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಜಾಹ್ನವಿ ಕಪೂರ್, ಪ್ಯಾನ್-ಇಂಡಿಯಾ ಬ್ಲಾಕ್ಬಸ್ಟರ್ ‘ಪುಷ್ಪಾ’ ದ ಹಿಟ್ ಡ್ಯಾನ್ಸ್ ಟ್ರ್ಯಾಕ್ ‘ಸಾಮಿ ಸಾಮಿ’ ಹಾಡಿಗೆ ಹೆಜ್ಜೆ ಹಾಕಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಜನಮನ ಸೆಳೆದರು.
ಜಾಹ್ನವಿ ಕಪೂರ್ ತನ್ನ ಲಯಬದ್ಧ ನೃತ್ಯದ ಮೂಲಕ ಅಭಿಮಾನಿಗಳ ಮನಗೆದ್ದರು. ಸುಂದರವಾದ ಹಸಿರು ಲೆಹೆಂಗಾ-ಚೋಲಿ ಸೆಟ್ನಲ್ಲಿ ನಟಿ ಮಿಂಚಿದರು.
Related Articles
ಈ ಹಿಂದೆ ಜಾಹ್ನವಿ ಕಪೂರ್ ದಕ್ಷಿಣಭಾರತದ ಚಿತ್ರಗಳಲ್ಲಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಅವರು ಕೊನೆಯದಾಗಿ ‘ಮಿಲಿ’ ಸಿನಿಮಾ ದಲ್ಲಿ ಕಾಣಿಸಿಕೊಂಡಿದ್ದರು,
ಇದನ್ನು ಅವರ ತಂದೆ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ನಿರ್ಮಿಸಿದ್ದಾರೆ.