Advertisement

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

09:14 PM Apr 19, 2024 | Team Udayavani |

ಕಲಬುರ್ಗಿ : ಕಲಬುರಗಿ ನಗರದ ರಾಮ ಮಂದಿರ ಸರ್ಕಲ್ ಬಳಿಯಿರುವ ಅಪಾರ್ಟ್ ಮೆಂಟೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಒಬ್ಬ ಬಾತ್ ರೂಮ್ ನಲ್ಲಿದ್ದ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿದ ಘಟನೆ ನಡೆದಿದೆ.

Advertisement

ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆಯಿದ್ದ ಮಹಿಳೆಯ ವಿಡಿಯೋವೊನ್ನು ಅಪಾರ್ಟ್ ಮೆಂಟ್ ನಲ್ಲೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ವಿಶ್ವನಾಥ್ ರೆಕಾರ್ಡ್ ಮಾಡುತ್ತಿದ್ದ. ಗಮನಿಸಿದ ಮಹಿಳೆ ತತ್ ಕ್ಷಣ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಹಿಳೆಯ ಗಂಡ ಮತ್ತು ಜನರು ಸೇರಿಕೊಂಡು ಸೆಕ್ಯುರಿಟಿ ಗಾರ್ಡ್ ನನ್ನ ಹಿಡಿದು ಥಳಿಸಿ ಅಂಡರ್ ಗ್ರೌಂಡ್ ನಲ್ಲಿರುವ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next