Advertisement

ನಾಳೆ ಶಿಕ್ಷಣ ಸಚಿವರಿಂದ ವೀಡಿಯೋ ಸಂವಾದ

02:55 AM Apr 12, 2020 | Sriram |

ಬೆಂಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಲಾಕ್‌ಡೌನ್‌ ಮುಗಿದ ಅನಂತರ ತೆಗೆದುಕೊಳ್ಳ ಬೇಕಾದ ತುರ್ತು ಕ್ರಮ, ಮುಂಜಾಗೃತ ಕ್ರಮದ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಸೋಮವಾರ ಎಲ್ಲ ಉಪನಿರ್ದೇಶಕರು, ಡಯಟ್‌ ಪ್ರಾಂಶುಪಾಲರೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ.

Advertisement

ವಸತಿ ನಿಲಯದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಮಾಹಿತಿ, ಎಸೆಸೆಲ್ಸಿ ವಿದ್ಯಾರ್ಥಿಗಳು ಲಾಕ್‌ಡೌನ್‌ ಅವಧಿ ಯಲ್ಲಿ ಆನ್‌ಲೈನ್‌ ಹಾಗೂ ಲಾಕ್‌ಡೌನ್‌ ತೆರವು ಅನಂತರ ಪರೀಕ್ಷಾ ದಿನಾಂಕ ನಿಗದಿ ಬಳಿಕ ಪರೀಕ್ಷೆಗೂ ಪೂರ್ವದಲ್ಲಿ ಆನ್‌ಲೈನ್‌ ಅಥವಾ ಆಫ್ಲೈನ್‌ ಮೂಲಕ ಪುನರ್‌ ಮನನ ತರಬೇತಿ ಬಗ್ಗೆ ಮಾಹಿತಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ತೆಗೆದು ಕೊಳ್ಳಬೇಕಾದ ಕಾರ್ಯಗಳು, ಮನೆಯಲ್ಲೇ ಇದ್ದು ಕೆಲಸ ಮಾಡುವ ಅವಧಿ ವಿಸ್ತರಿಸುವ ಕುರಿತು, ಎಸ್‌ಎಟಿಎಸ್‌ನಲ್ಲಿ ವಿವರ ದಾಖಲಿಸುವುದು, 7ನೇ ತರಗತಿ ಪ್ರಶ್ನೆಪತ್ರಿಕೆ ಸದ್ಬಳಕೆ ಮತ್ತು ಲಾಕ್‌ಡೌನ್‌ ಅನಂತರ ಸುಗಮವಾಗಿ ಎಸೆಸೆಲ್ಸಿ ಪರೀಕ್ಷೆ ನಡೆಸುವುದು ಸಹಿತ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next