Advertisement

Blackmail: ಅಶ್ಲೀಲ ವಿಡಿಯೋ; ಅಕ್ಕನಿಂದ ತಂಗಿಯ ಬ್ಲ್ಯಾಕ್‌ಮೇಲ್ ‌

12:40 PM Oct 24, 2024 | Team Udayavani |

ಬೆಂಗಳೂರು: ಅಕ್ಕನೇ ತನ್ನ ಪ್ರಿಯಕರನ ಜತೆ ಸೇರಿ ತಂಗಿಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಕೆಂಗೇರಿ ಉಪನಗರ ನಿವಾಸಿ 37 ವರ್ಷದ ಮಹಿಳೆ ನೀಡಿದ ದೂರು ಆಧರಿಸಿ ಕೆಂಗೇರಿ ಠಾಣೆ ಪೊಲೀಸರು, ದೂರುದಾರೆಯ ಸಹೋದರಿ ಬಿಂದು, ಆಕೆಯ ಪ್ರಿಯಕರ ಇರ್ಫಾನ್‌ ಪಾಷಾ ಹಾಗೂ ದೂರುದಾರೆಯ ಪ್ರಿಯಕರ ಮೊಹಮ್ಮದ್‌ ತಬ್ರೇಜ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದೂರುದಾರ ಮಹಿಳೆ ವಿವಾಹಿತಳಾಗಿದ್ದು, ತನ್ನ ಬಾಲ್ಯ ಸ್ನೇಹಿತ ತಬ್ರೇಜ್‌ ಜತೆ ಪ್ರೀತಿ ಮುಂದುವರಿಸಿದ್ದರು. ಈ ಮಧ್ಯೆ 2022-23ರಲ್ಲಿ ಕೆಂಗೇರಿಯಲ್ಲಿರುವ ತನ್ನ ಅಕ್ಕ ಬಿಂದು ಮನೆಗೆ ಹೋಗುತ್ತಿದ್ದಾಗ, ತನ್ನ ಪ್ರಿಯಕರ ತಬ್ರೇಜ್‌ ಜತೆ ನಗ್ನವಾಗಿ ವಿಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಅದನ್ನು ತಬ್ರೇಜ್‌ ರೇಕಾರ್ಡ್‌ ಮಾಡಿಕೊಂಡಿದ್ದಾನೆ. ಈ ವಿಡಿಯೋವನ್ನು ಬಿಂದು ಮತ್ತು ಆಕೆಯ ಪ್ರಿಯಕರ ಇರ್ಫಾನ್‌ ಪಾಷಾಗೆ ಕಳುಹಿಸಿದ್ದ. ಬಳಿಕ ಮೂವರು ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ಅಲ್ಲದೆ, ಆಕೆಯ ಸಂಬಂಧಿಕರಿಗೂ ಕಳುಹಿಸಿದ್ದಾರೆ. ಅಲ್ಲದೆ, 80 ಸಾವಿರ ರೂ. ನೀಡದಿದ್ದರೆ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next