Advertisement

ವಿದರ್ಭ ಕುಸಿತ; ಕರ್ನಾಟಕಕ್ಕೂ ಸಂಕಟ

10:12 AM Dec 18, 2017 | |

ಕೋಲ್ಕತಾ: “ಈಡನ್‌ ಗಾರ್ಡನ್ಸ್‌’ ನಲ್ಲಿ ಆರಂಭಗೊಂಡ ಕರ್ನಾಟಕ-ವಿದರ್ಭ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್‌ ಮುಖಾಮುಖೀಯಲ್ಲಿ ಮೊದಲ ದಿನ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಅಭಿಮನ್ಯು ಮಿಥುನ್‌ ದಾಳಿಗೆ ನಲುಗಿದ ವಿದರ್ಭ ಮೊದಲ ಇನಿಂಗ್ಸ್‌ ನಲ್ಲಿ 185 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್‌ ಆಗಿದೆ. ಇದಕ್ಕೆ ಉತ್ತರವಾಗಿ ಕನಾರಟಕ 36ಕ್ಕೆ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವಿದರ್ಭ ಆರಂಭದಲ್ಲಿಯೇ ಎಡವಿತು. ತಂಡದ ಮೊತ್ತ 22 ರನ್‌ ಆಗಿದ್ದಾಗ ನಾಯಕರಿಬ್ಬರ ಮುಖಾಮುಖೀಯಲ್ಲಿ ಫೈಜ್‌ ಫ‌ಜಲ್‌ (12) ವಿನಯ್‌ ಬಲೆಗೆ ಬಿದ್ದರು. ಸ್ಕೋರ್‌ 49 ರನ್‌ ಆಗುವಷ್ಟರಲ್ಲಿ ಸ್ಟುವರ್ಟ್‌ ಬಿನ್ನಿ ಎಸೆತದಲ್ಲಿ ಮತ್ತೂಬ್ಬ ಆರಂಭಿಕ ಆಟಗಾರ ಸಂಜಯ್‌ ರಾಮಸ್ವಾಮಿ (22 ರನ್‌) ಕೂಡ ಲೆಗ್‌ ಬಿಫೋರ್‌ ಆದರು.

3ನೇ ವಿಕೆಟ್‌ಗೆ ಜತೆಯಾದ ವಾಸಿಮ್‌ ಜಾಫ‌ರ್‌-ಗಣೇಶ್‌ ಸತೀಶ್‌ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದರು. ಈ ಜೋಡಿ ದೊಡ್ಡ ಜತೆಯಾಟದ ಸೂಚನೆ ನೀಡಿತು. ಸ್ಕೋರ್‌ 97ಕ್ಕೆ ಏರಿತು. ಆಗ ಮಿಥುನ್‌ ಎಸೆತದಲ್ಲಿ ಗಣೇಶ್‌ ಸತೀಶ್‌ ಕೀಪರ್‌ ಗೌತಮ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಗಣೇಶ್‌ ಔಟ್‌ ಆದ ಬೆನ್ನಲ್ಲಿಯೇ ಮಿಥುನ್‌ ದಾಳಿಯ ಅಬ್ಬರಕ್ಕೆ ವಿದರ್ಭ ತತ್ತರಿಸಿತು. ಒಬ್ಬರ ಹಿಂದೊಬ್ಬಬ್ಬರಂತೆ ವಿಕೆಟ್‌ ಕಳೆದುಕೊಂಡರು. ಆದಿತ್ಯ ಸರ್ವಟೆ ಮಾತ್ರ ಕರ್ನಾಟಕದ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. 64 ಎಸೆತ ಎದುರಿಸಿದ ಸರ್ವಟೆ ವಿದರ್ಭ ಪರ ಸರ್ವಾಧಿಕವೆನಿಸಿದ 47 ರನ್‌ ಬಾರಿಸಿದರು. ಇದರಲ್ಲಿ 7 ಬೌಂಡರಿ ಸೇರಿತ್ತು.

ಹ್ಯಾಟ್ರಿಕ್‌ ವಂಚಿತ ಮಿಥುನ್‌
ಘಾತಕ ದಾಳಿ ನಡೆಸಿದ ಮಿಥುನ್‌ಗೆ ಹ್ಯಾಟ್ರಿಕ್‌ ವಿಕೆಟ್‌ ಪಡೆಯುವ ಅವಕಾಶ ವೊಂದಿತ್ತು. ಆದರೆ ಇದು ಸ್ವಲ್ಪದ ರಲ್ಲಿಯೇ ಕೈತಪ್ಪಿತು. ಮಿಥುನ್‌ ಎಸೆದ ಇನಿಂಗ್ಸ್‌ನ 57ನೇ ಓವರಿನ 3ನೇ ಎಸೆತದಲ್ಲಿ ಅಕ್ಷಯ್‌ ವಖಾರೆ, 4ನೇ ಎಸೆತದಲ್ಲಿ ರಜನೀಶ್‌ ಗುರ್ಬಾನಿ ವಿಕೆಟ್‌ ಹಾರಿಸಿದರು. “ಹ್ಯಾಟ್ರಿಕ ಎಸೆತ’ವನ್ನು ಉಮೇಶ್‌ ಯಾದವ್‌ ಹೇಗೋ ಎದುರಿಸಿದರು. ಆದರೆ ಆ ಓವರಿನ ಅಂತಿಮ ಎಸೆತದಲ್ಲಿ ಬದಲಿ ಆಟಗಾರ ಅಬ್ಟಾಸ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು. ಹೀಗೆ ಹ್ಯಾಟ್ರಿಕ್‌ ಅವಕಾಶ ಕಳೆದುಕೊಂಡ ಮಿಥುನ್‌ 4 ಎಸೆತಗಳಲ್ಲಿ 3 ವಿಕೆಟ್‌ ಹಾರಿಸಿ ಮೆರೆದರು. ಮಿಥುನ್‌ ಸಾಧನೆ 45 ರನ್ನಿಗೆ 5 ವಿಕೆಟ್‌ಅವರು ಪ್ರಸಕ್ತ ರಣಜಿ ಟ್ರೋಫಿಯಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತ 3ನೇ ಸಂದರ್ಭ ಇದಾಗಿದೆ.

Advertisement

ಕರ್ನಾಟಕ ಕುಸಿತ
ಕರ್ನಾಟಕ ಈಗಾಗಲೇ ಮಾಯಾಂಕ್‌ ಅಗರ್ವಾಲ್‌ (15), ಆರ್‌. ಸಮರ್ಥ್ (6), ಮತ್ತು ಡಿ. ನಿಶ್ಚಲ್‌ (0) ವಿಕೆಟ್‌ ಕಳೆದುಕೊಂಡಿದೆ. ಕರುಣ್‌ ನಾಯರ್‌ (6) ಮತ್ತು ಸಿ.ಎಮ್‌. ಗೌತಮ್‌ (9) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಈಡನ್‌ ಅಂಗಳ ಬ್ಯಾಟ್ಸ್‌ಮನ್‌ಗಳಿಗೆ ಎಷ್ಟರ ಮಟ್ಟಿಗೆ ನೆರವು ನೀಡುತ್ತದೋ ತಿಳಿಯದು. ಹೀಗಾಗಿ ಫೈನಲ್‌ ತಲುಪ ಬೇಕಾದರೆ ಕನಿಷ್ಠ ಇನ್ನಿಂಗ್ಸ್‌ ಮುನ್ನಡೆ ಅತ್ಯಗತ್ಯ. ಕರ್ನಾಟಕ ಈ ಗುರಿಯನ್ನು ಮೊದಲು ಈಡೇರಿಸಿಕೊಳ್ಳಬೇಕಿದೆ.

ಬಂಗಾಲ 7ಕ್ಕೆ 269
ಪುಣೆ: ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ದಿಲ್ಲಿ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದ ಬಂಗಾಲ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 269 ರನ್‌ ಪೇರಿಸಿದೆ.

ಸಂಕ್ಷಿಪ್ತ ಸ್ಕೋರು
ಬಂಗಾಲ ಪ್ರಥಮ ಇನ್ನಿಂಗ್ಸ್‌ 7 ವಿಕೆಟಿಗೆ 269 (ಅಭಿಷೇಕ್‌ ರಾಮನ್‌ 36, ಸುದೀಪ್‌ ಚಟರ್ಜಿ 83, ಋತಿಕ್‌ ಚಟರ್ಜಿ 47, ಮನೋಜ್‌ ತಿವಾರಿ 30, ಅನುಸ್ತುಪ್‌ ಮಜುಂದಾರ್‌ 32, ಸೈನಿ 45ಕ್ಕೆ 2, ಮನನ್‌ ಶರ್ಮ 37ಕ್ಕೆ 2).

ಸ್ಕೋರ್‌ಪಟ್ಟಿ
ವಿದರ್ಭ ಪ್ರಥಮ ಇನ್ನಿಂಗ್ಸ್‌
ಫೈಜ್‌ ಫ‌ಜಲ್‌    ಎಲ್‌ಬಿಡಬ್ಲ್ಯು ವಿನಯ್‌    12
ಆರ್‌. ಸಂಜಯ್‌    ಎಲ್‌ಬಿಡಬ್ಲ್ಯು ಬಿನ್ನಿ    22
ವಾಸಿಮ್‌ ಜಾಫ‌ರ್‌    ಸಿ ಸಮರ್ಥ್ ಬಿ ಅರವಿಂದ್‌    39
ಗಣೇಶ್‌ ಸತೀಶ್‌    ಸಿ ಗೌತಮ್‌ ಬಿ ಮಿಥುನ್‌    30
ಅಪೂರ್ವ್‌ ವಾಂಖೇಡೆ    ಬಿ ಮಿಥುನ್‌    1
ಅಕ್ಷಯ್‌ ವಾಡ್ಕರ್‌    ಸಿ ಗೌತಮ್‌ ಬಿ ವಿನಯ್‌    12
ಆದಿತ್ಯ ಸರ್ವಟೆ    ಸಿ ಗೌತಮ್‌ ಬಿ ಗೋಪಾಲ್‌    47
ಅಕ್ಷಯ್‌ ವಖಾರೆ    ಸಿ ಗೌತಮ್‌ ಬಿ ಮಿಥುನ್‌    18
ರಜನೀಶ್‌ ಗುರ್ಬಾನಿ    ಬಿ ಮಿಥುನ್‌    0
ಉಮೇಶ್‌ ಯಾದವ್‌    ಸಿ ಅಬ್ಟಾಸ್‌ ಬಿ ಮಿಥುನ್‌    0
ಸಿದ್ದೇಶ್‌ ನೆರಾಲ್‌    ಔಟಾಗದೆ    0

ಇತರ        3
ಒಟ್ಟು  (ಆಲೌಟ್‌)        184
ವಿಕೆಟ್‌ ಪತನ: 1-22, 2-49, 3-96, 4-98, 5-107, 6-129, 7-170, 8-170, 9-170. 

ಬೌಲಿಂಗ್‌: ವಿನಯ್‌ ಕುಮಾರ್‌    15-4-36-2
ಅಭಿಮನ್ಯು ಮಿಥುನ್‌        16-6-45-5
ಶ್ರೀನಾಥ್‌ ಅರವಿಂದ್‌        12-3-41-1
ಸ್ಟುವರ್ಟ್‌ ಬಿನ್ನಿ        15-3-48-1
ಕೃಷ್ಣಪ್ಪ ಗೌತಮ್‌        3-0-7-0
ಶ್ರೇಯಸ್‌ ಗೋಪಾಲ್‌        0.4-0-4-1

ಕರ್ನಾಟಕ ಪ್ರಥಮ ಇನ್ನಿಂಗ್ಸ್‌
ಆರ್‌. ಸಮರ್ಥ್    ಸಿ ವಾಡ್ಕರ್‌ ಬಿ ಗುರ್ಬಾನಿ    6
ಮಾಯಾಂಕ್‌ ಅಗರ್ವಾಲ್‌    ಎಲ್‌ಬಿಡಬು ಯಾದವ್‌    15
ಡಿ. ನಿಶ್ಚಲ್‌    ಬಿ ಗುರ್ಬಾನಿ    0
ಕರುಣ್‌ ನಾಯರ್‌    ಬ್ಯಾಟಿಂಗ್‌    6
ಸಿ.ಎಂ. ಗೌತಮ್‌    ಬ್ಯಾಟಿಂಗ್‌    9

ಇತರ        0
ಒಟ್ಟು  (3 ವಿಕೆಟಿಗೆ)        36
ವಿಕೆಟ್‌ ಪತನ: 1-17, 2-21, 3-21.

ಬೌಲಿಂಗ್‌:
ಉಮೇಶ್‌ ಯಾದವ್‌        7-1-22-1
ರಜನೀಶ್‌ ಗುರ್ಬಾನಿ        6-1-9-2
ಸಿದ್ದೇಶ್‌ ನೆರಾಲ್‌        1-0-5-0

Advertisement

Udayavani is now on Telegram. Click here to join our channel and stay updated with the latest news.

Next