ಬಾಗಲಕೋಟೆ: ಸ್ವಾಭಿಮಾನಿ ಮತದಾರರು ಬದಲಾವಣೆ ಬಯಸಿದ್ದು, ಬರುವ ಮೇ 10 ರಂದು ಜನನಾಯಕನ ಮುಖವಾಡ ಹಾಕಿಕೊಂಡು ನಾಟಕವಾಡುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ವಿದ್ಯಾಗಿರಿಯ 22ನೇ ಕ್ರಾಸ್ ಸೇರಿದಂತೆ ವಿವಿಧೆಡೆ ಮನೆ ಮನೆಗೆ ತರೆಳಿ ರವಿವಾರ ಪ್ರಚಾರ ನಡೆಸಿ ಮತಯಾಚಿಸಿದರು.
ಕ್ಷೇತ್ರದ ಜನರು ತಮ್ಮ ಸೇವೆ ಮಾಡುತ್ತಾರೆ ಎಂದು ನಂಬಿ ತಮ್ಮ ಮತವನ್ನು ನೀಡಿ ಗೆಲ್ಲಿಸಿ ತಂದು ನಾಯಕನ ಸ್ಥಾನದಲ್ಲಿ ಕೂರಿಸಿದರೆ, ಜನಸೇವೆ ಮಾಡುವುದು ಬಿಟ್ಟು ಸರ್ವಾಧಿಕಾರದ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಜನರು ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಹಾಗಾಗಿ ಈ ಬಾರಿ ಕ್ಷೇತ್ರದ ಜನರು ಬದಲಾವಣೆ ಬಯಸಿ ಆಟೋರಿಕ್ಷಾ ಚಿನ್ಹೆಗೆ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಜನಸೇವೆಗಾಗಿ ಆಟೋರಿಕ್ಷಾ ಸಂಚರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಬದಲಾವಣೆಯ ಇತಿಹಾಸ ಸೃಷ್ಟಿಸಲಿದ್ದಾರೆ ಎಂದರು.
ರೈತರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಅವರಿಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲ. ಬಾಗಲಕೋಟೆಯಲ್ಲಿ ಉದ್ಯೋಗ ಸೃಷ್ಟಿಸುವ ಪ್ರಯತ್ನವಾಗಿಲ್ಲ ಎಂದರು.
ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಶಂಕರ ಮಗಜಿ, ವಿಶಾಲ ಮಾಂಡಗಿ, ಮುತ್ತು ಸಜ್ಜನ, ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯಹಂಚಿನಮಠ, ವಿರೇಶ ಹಿರೇಮಠ, ಚರಣ ಜಾಧವ, ವಿಠಲ ಕಾಳಬರ, ಈರಣ್ಣ ವಿಜಯಪುರ, ಹನಮಂತ ಕರಾಡೆ,ನಾಗರಾಜ ಕಾಂಬಳೆ, ಶಾಂತಾಬಾಯಿ
ಗೋಣಿ, ವಿಜಯಲಕ್ಷ್ಮೀ ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ, ಸಾಗರ ವೈದ್ಯ, ಸುರೇಶ ದೊಡಮನಿ, ವಿರೇಶ ಮುತ್ತಿನಮಠ, ಜಿ.ವಿ. ಕಂಬಳಿ, ಮುತ್ತುಮುರನಾಳ, ನರಸಿಂಹ ಉಮರ್ಜಿ, ಕರಬಸಪ್ಪ ಕತ್ತಿ ಪಾಲ್ಗೊಂಡಿದ್ದರು.