Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ಅವರ ಕುಟುಂಬದವರು ಸ್ಪರ್ಧೆ ಮಾಡಿದರೆ ಸೂಕ್ತ ಎಂಬುದು ಅಲ್ಲಿನ ಮತದಾರರ ಅನಿಸಿಕೆಯಾಗಿದೆ. ಬಸವರಾಜ ಬೊಮ್ಮಯಿ ಅವರಿಗೆ ಪುತ್ರನಿಗೆ ಟಿಕೆಟ್ ದೊರಕಿಸಲು ಅಸಕ್ತಿ ಇಲ್ಲ ಆದರೆ ಜನರ ಅಭಿಪ್ರಾಯವಾಗಿದೆ ಎಂದರು.
Related Articles
Advertisement
ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ದೊರಕಿಸಲು ಹಣ ನೀಡಿದ ಬಗ್ಗೆ ಕೇಂದ್ರ ಸಚಿವ ಜೋಶಿ ಸಹೋದರನ ವಿರುದ್ದ ದೂರು ದಾಖಲು ಆಗಿದೆ. ಪಕ್ಷಕ್ಕೆ ಇದು ಸಂಬಂಧವಿಲ್ಲ. ಜೋಶಿಯವರಿಗೂ ಅವರ ಸಹೋದರನಿಗೆ ರಾಜಕೀಯವಾಗಿ ಯಾವುದೇ ಸಂಪರ್ಕ ಇಲ್ಲವಾಗಿದೆ. ತಪ್ಪಾಗಿದ್ದರೆ, ಜೋಶಿ ಅವರ ಸಹೋದರನ ವಿರುದ್ದ ಕ್ರಮ ಕೈಗೊಳ್ಳಲಿ ಎಂದರು.
ಗಲಭೆ ಪ್ರಕರಣ ವಾಪಸ್: ಅ. 25ಕ್ಕೆ ಬಿಜೆಪಿ ಪ್ರತಿಭಟನೆಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಅ. 25ರಂದು ಹುಬ್ಬಳ್ಳಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹಿತ 25 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದರು.