Advertisement

Politics: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಗೆಲುವು?

10:26 PM Aug 20, 2023 | Team Udayavani |

ನವದೆಹಲಿ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಜಯ ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ. “ಎಬಿಪಿ” ಸುದ್ದಿವಾಹಿನಿ “ಸಿ ವೋಟರ್‌’ ಸಂಸ್ಥೆ ಜತೆಗೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 48ರಿಂದ 54 ಸ್ಥಾನಗಳು ಲಭಿಸುವ ಸಾಧ್ಯತೆಗಳು ಇವೆ.

Advertisement

ಅಂದರೆ ಕಾಂಗ್ರೆಸ್‌ಗೆ ಸರಳ ಬಹುಮತಕ್ಕಿಂತ ಹೆಚ್ಚು ಸ್ಥಾನಗಳು ಲಭಿಸಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಗೆ 35ರಿಂದ 41, ಇತರರಿಗೆ 4 ಸ್ಥಾನಗಳ ವರೆಗೆ ಲಭಿಸುವ ಸಾಧ್ಯತೆ ಇದೆ. ಆ ರಾಜ್ಯದ ವಿಧಾನಸಭೆಯ ಒಟ್ಟು ಸ್ಥಾನಗಳು 90. ಆದರೆ, ಪ್ರಧಾನಿ ಹುದ್ದೆಗೆ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next