ಲೋಕಾಪುರ: ಘಟಪ್ರಭಾ ನದಿ ಪ್ರವಾಹದಿಂದ ತತ್ತರಿಸಿದ ಜನರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೆಬ್ಟಾಳದ ಗ್ರಾಮದ ಸಂತ್ರಸ್ತರು ರಾಜ್ಯ ಹೆದ್ದಾರಿ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ತಡೆದು ಸುಮಾರು 2 ಗಂಟೆ ಕಾಲ ರಸ್ತೆ ಬಂದ್ ಮಾಡಿ ಟೈಯರ್‌ಗೆ ಬೆಂಕಿ ಹೆಚ್ಚಿ ಸರಕಾರದ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಸರಿಯಾಗಿ ಸರ್ವೇ ಕಾರ್ಯ ಆಗಿಲ್ಲ, ಕೆಲವು ಅರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇಂತಹ ಸಂತ್ರಸ್ತರ ಕಣ್ಣೀರು ಒರೆಸಬೇಕು. ಹಲವು ಮನೆಗಳಿಗೆ ಪರಿಹಾರ ಸಮರ್ಪಕವಾಗಿ ದೊರೆತಿಲ್ಲ, ಸರಕಾರ ನಮ್ಮ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು. ಸಂತ್ರಸ್ತರಿಗೆ ನೆರವು ನೀಡುವಲ್ಲಿ ತಾರತಮ್ಯ ಬೇಡ. ಪುನರ್ ಸರ್ವೇ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಧೋಳ ತಹಶೀಲ್ದಾರ್ ಎಸ್.ಎ.ಇಂಗಳೆ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿ, ಐವರು ಅಧಿಕಾರಿಗಳ ತಂಡವನ್ನು ರಚನೆ ಮಾಡಿ ಗ್ರಾಮದಲ್ಲಿ ಪುನರ್ ಸರ್ವೇ ಮಾಡಿ ಅರ್ಹ ಸಂತ್ರಸ್ತರಿಗೆ ಸರಕಾರಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎ.ಬಿ.ಅಡವಿಮಠ, ಮುಧೋಳ ಸಿಪಿಐ ಎಚ್.ಆರ್.ಪಾಟೀಲ, ಲೋಕಾಪುರ ಪಿಎಸ್‌ಐ ಎಸ್.ಎಚ್. ಪವಾರ, ಉಪತಹಶೀಲ್ದಾರ್ ಎ.ಬಿ.ಪಾಂಡವ, ಕಂದಾಯ ನಿರೀಕ್ಷಕ ಬಸವರಾಜ ಸಿಂಧೂರ ಸ್ಥಳದಲ್ಲಿ ಇದ್ದರು.
ಪ್ರತಿಭಟನೆಯಲ್ಲಿ ಗಡ್ಡೆಪ್ಪ ಬಾರಕೇರ, ಮಾಹಾದೇವ ಹೊಸಟ್ಟಿ, ಡಾ| ಶಿವಾನಂದ ಹುದ್ದಾರ, ಮಹಾಂತೇಶ ಮಹಾಲಿಂಗಪುರ, ಸದಾಶಿವ ಲಾಯಮ್ಮನವರ, ರಾಜುಗೌಡ್ರ ನ್ಯಾಮಗೌಡರ, ಹಣಮಂತ ರಾಜವ್ವಗೋಳ, ರಮೇಶ ವಜ್ರಮಟ್ಟಿ, ಹಣಮಂತ ಗುರಜಟ್ಟಿ, ರಾಮಣ್ಣ ಜೋಗಿ ಮತ್ತು ಹೆಬ್ಟಾಳ ಗ್ರಾಮಸ್ಥರು ಇದ್ದರು.