Advertisement

ನಾಲ್ಕನೇ ದಿನಕ್ಕೆ ಕಾಲಿಟ್ಟ ಸಂತ್ರಸ್ತರ ಧರಣಿ ಸತ್ಯಾಗ್ರಹ

04:10 PM Dec 21, 2019 | Suhan S |

ಬನಹಟ್ಟಿ: ಪ್ರವಾಹದ ನಂತರವೂ ತೀವ್ರ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಸರ್ಕಾರ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

Advertisement

ರೈತ ಸಂಘದ ಮುಖಂಡ ಮಾಯಪ್ಪ ತುರಾದಿ ಮಾತನಾಡಿ, ಧರಣಿ ಸ್ಥಳಕ್ಕೆ ಸ್ಥಳೀಯ ತಹಶೀಲ್ದಾರ್‌ ಬಂದು 86 ಫಲಾನುಭವಿಗಳಲ್ಲಿ 6 ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು, ಉಳಿದವರಿಗೆ ಪರಿಹಾರ ನೀಡಲ್ಲ ಎಂದಿದ್ದಾರೆ. ಉಳಿದವರು ಪ್ರವಾಹ ಸಂತ್ರಸ್ತರಲ್ಲವೇ?, ಎಲ್ಲ ಫಲಾನುಭವಿಗಳಿಗೂ ಪರಿಹಾರ ಸಿಗಬೇಕು. ಅಲ್ಲಿಯವರೆಗೆ ಸತ್ಯಾಗ್ರಹ ನಿಲ್ಲವುದಿಲ್ಲ. ಸತ್ಯಾಗ್ರಹಕ್ಕೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು. ಇಲ್ಲಿನ ಸಂತ್ರಸ್ತರ ನೈಜ ಪರಿಸ್ಥಿತಿ ಅರಿತು ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ, ಪದ್ಮಜೀತ ನಾಡಗೌಡ ಪಾಟೀಲ, ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಸಿದ್ದು ಉಳ್ಳಾಗಡ್ಡಿ, ರವಿ ಕೊರ್ತಿ, ಸದಾಶಿವ ಗೊಂದಕರ, ನೇಕಾರ ಸಂಘಟನೆಯ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಸೇರಿದಂತೆ ಅನೇಕರು ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next