ಬೀದರ: ಕಾರಂಜಾ ಜಲಾಶಯದಿಂದ ಹೆಚ್ಚುವರಿ ಜಮೀನಿನಲ್ಲಿ ನಾಶವಾದ ಬೆಳೆಗಳಿಗೆ ಶೀಘ್ರ ಬೆಳೆ ಪರಿಹಾರ ನೀಡಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ.
ಈ ಕುರಿತು ಸಮಿತಿ ಅಧ್ಯಕ್ಷಚಂದ್ರಶೇಖರ ಪಾಟೀಲ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಯಿಂದ ಹೆಚ್ಚುವರಿ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಮತ್ತು ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕಬ್ಬಿನ ಜಮೀನು ತನ್ನ ಫಲವತ್ತತೆ ಕಳೆದುಕೊಂಡು ಮುಂದಿನ ಐದು ವರ್ಷ ಕಾಲ ಕಬ್ಬಿನ ಬೆಳೆ ಲಾವಣಿ ಮಾಡಲು ಸಹ ಆಗುವುದಿಲ್ಲ. ಜತೆಗೆ ಇತರೆ ಬೇರೆ ಬೆಳೆ ಬೆಳೆಯಲು ಭೂಮಿಫಲವತ್ತಾಗಿರುವುದಿಲ್ಲ. ಆದ್ದರಿಂದ ಈಹೆಚ್ಚುವರಿ ಜಮೀನಿನ ಸರ್ವೇ ಮಾಡಿ,ಅದರ ವೈಜ್ಞಾನಿಕ ಪರಿಹಾರ ಶೀಘ್ರ ನೀಡಬೇಕೆಂದು ಒತ್ತಾಯಿಸಲಾಗಿದೆ.
ಜಲಾಶಯಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ವೈಜ್ಞಾನಿಕ ಪರಿಹಾರಧನ ಈವರೆಗೆನೀಡದಿರುವುದು ವಿಷಾದನಿಯ. ಕನಿಷ್ಟ ಇತ್ತೀಚೆಗೆ ಅತಿವೃಷ್ಟಿಯಿಂದಾಗಿಬೆಳೆದ ಪೈರುಗಳು ನಾಶವಾಗಿರುವುದಕ್ಕೆ ಪರಿಹಾರ ನೀಡುವುದಲ್ಲಿ ವಿಳಂಬವಾಗುತ್ತಿರುವುದು ಇನ್ನೂ ಶೋಚನೀಯ. ಸರ್ಕಾರ ರೈತರ ಪರವಾಗಿದೆ ಎಂದು ಡಂಗುರ ಸಾರುತ್ತಿದ್ದು, ಅದು ಕಾರ್ಯರೂಪದಲ್ಲಿ ತರದಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಲಾಗಿದೆ. ಕಾರಂಜಾ ಜಲಾಶಯದಲ್ಲಿ
ಭೂಮಿ-ಮನೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವ ವಿಷಯ ನನೆಗುದಿಗೆ ಬಿದ್ದಿರುವುದು ಖೇದಕರ ಸಂಗತಿ. ಹಲವುವರ್ಷಗಳಿಂದ ಹೋರಾಟ ನಡೆಸುತ್ತ ಬಂದರೂ ಸರ್ಕಾರ ಇದರತ್ತ ಕಾಳಜಿತೋರುತ್ತಿಲ್ಲ. ಮುಂದಿನ ದಿನಗಳಲ್ಲಿ ವೈಜ್ಞಾನಿಕ ಪರಿಹಾರಕ್ಕಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಸಿ ರಾಮಚಂದ್ರನ್ ಆರ್. ಮನವಿ ಸ್ವೀಕರಿಸಿ ಮಾತನಾಡಿ, ಜಲಾಶಯದಿಂದಮುಳುಗಡೆಯಾದ ಹೆಚ್ಚುವರಿ ಜಮೀನಿನ ಸರ್ವೇ ಮಾಡಿಸಿ ಕಾನೂನಿನಚೌಕಟಿನಲ್ಲಿ ದೊರೆಯಬಹುದಾದಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಭಯ ನೀಡಿದರು.
ಈ ವೇಳೆ ಸಮಿತಿ ನಿರ್ದೇಶಕ ವೀರಭದ್ರಪ್ಪ ಉಪ್ಪಿನ್, ಪ್ರಮುಖರಾದಬಸವರಾಜ ಮೂಲಗೆ, ಶಂಕರರಾವ್ ದೇವಣ್ಣನೊರ್, ನಾಗಶೆಟ್ಟೆಪ್ಪ ಹಚ್ಚಿ,ಬಸವರಾಜ ಮೂಲಗೆ, ಶಂಕರರಾವ್ ಗುಂಡಪ್ಪ, ಮಾಣಿಕ, ದೇವಣ್ಣನೋರ್,ವೀರಶೆಟ್ಟಿ, ರಮೇಶರೆಡ್ಡಿ, ಸಿದ್ರಾಮಪ್ಪಾ, ಅರ್ಜುನ, ಮಲ್ಲಶೆಟ್ಟಪ್ಪ, ಸೂರ್ಯಕಾಂತ ಲಾಲಪ್ಪಾ, ಸೋಮನಾಥ ಇದ್ದರು.