Advertisement

VHP: ಡಾ|ಎಂ.ಬಿ. ಪುರಾಣಿಕ್‌ಗೆ ವಿಹಿಂಪ ಅಭಿನಂದನೆ

11:52 PM Apr 06, 2023 | Team Udayavani |

ಮಂಗಳೂರು: ಸಮಾಜದ ನೋವು ನಲಿವಿಗೆ ಸದಾ ಸ್ಪಂದಿಸುತ್ತಿರುವ ಡಾ| ಎಂ.ಬಿ. ಪುರಾಣಿಕ್‌ ಸಮಾಜದ ದೊಡ್ಡ ಶಕ್ತಿ. ಸತತ ಪರಿಶ್ರಮದಿಂದ ಸಾಧನೆಯ ಮೆಟ್ಟಿಲು ಏರುವುದರೊಂದಿಗೆ ಸಮಾಜವನ್ನೂ ಜತೆಯಾಗಿ ಮುನ್ನಡೆಸಿದ್ದಾರೆ ಎಂದು ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೆಟ್‌ ಪುರಸ್ಕೃತರಾದ ಡಾ| ಎಂ.ಬಿ. ಪುರಾಣಿಕ್‌ ಅವರಿಗೆ ವಿಶ್ವಹಿಂದೂ ಪರಿಷತ್‌ ಮಂಗಳೂರು ವತಿಯಿಂದ ಡೊಂಗರಕೇರಿ ಶ್ರೀ ಭುವನೇಂದ್ರ ಮಂಟಪದಲ್ಲಿ ಗುರುವಾರ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಂಘ ಪರಿವಾರಕ್ಕೆ ಹಿರಿಯಣ್ಣನಾಗಿ ಮಾರ್ಗದರ್ಶನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗುವಂತಾಗಲಿ. ಶ್ರೀ ಕೃಷ್ಣ, ಶ್ರೀರಾಮರ ಶ್ರೀರಕ್ಷೆ ನಿರಂತರವಾಗಿ ಇರಲಿ ಎಂದು ಹಾರೈಸಿದರು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಪುರಾಣಿಕರು ತನ್ನದೇ ಆದ ಸೇವೆ ನೀಡುವ ಜತೆಗೆ, ಯುವಕರು ಸಮಾಜಮುಖೀಯಾಗಿ ಬೆಳೆಯಲು ಮಾರ್ಗದರ್ಶನ ನೀಡಿದ್ದಾರೆ. ಹಿಂದೂ ಸಮಾಜದ ಮೇಲೆ ಅನ್ಯಾಯವನ್ನು ವಿರೋಧಿಸಿ ಗಟ್ಟಿಧ್ವನಿಯಲ್ಲಿ ಮಾತನಾಡುವ ಶಕ್ತಿ ಹೊಂದಿದ್ದಾರೆ ಎಂದರು.

ಅರ್ಹತೆಗೆ ಗೌರವ
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನದಲ್ಲಿ, ಪುರಾಣಿಕರು ವಿಹಿಂಪ-ಬಜರಂಗದಳಕ್ಕೆ ಅಶ್ವತ್ಥ ಮರ ಇದ್ದಂತೆ. ಅರ್ಹವಾಗಿಯೇ ಡಾಕ್ಟರೆಟ್‌ ಗೌರವ ಲಭಿಸಿದೆ ಎಂದರು.

ಆರೆಸ್ಸೆಸ್‌ ದಕ್ಷಿಣ ಪ್ರಾಂತ ಸಂಘ ಚಾಲಕ ಡಾ| ಪಿ. ವಾಮನ ಶೆಣೈ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ವೇ| ಮೂ| ಹರಿನಾರಾಯಣ ಆಸ್ರಣ್ಣ ಶುಭಾಶಂಸನೆಗೈದರು. ಡೊಂಗರಕೇರಿ ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಅಧ್ಯಕ್ಷ ಡಿ. ವಾಸುದೇವ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ವಿಹಿಂಪ ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್‌, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ರವಿಶಂಕರ ಮಿಜಾರು, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಕೊಂಚಾಡಿ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ಜೆ. ಬಾಲಕೃಷ್ಣ ಕೊಟ್ಟಾರಿ, ಕುಲಶೇಖರ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್‌ ಕಲಾºವಿ, ಪಂಬದರ ಯಾನೆ ದೈವಾದಿಗರ ಸಮಾಜ ಸಂಘದ ಮಾಜಿ ಅಧ್ಯಕ್ಷ ಕಮಲಾಕ್ಷ ಗಂಧಕಾಡು, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಾನಂದ ಗುಜರನ್‌ ಉಪಸ್ಥಿತರಿದ್ದರು.

ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್‌ ಹನುಮಾನ್‌ ಚಾಲೀಸಾ ಪಠಿಸಿದರು. ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌ ಪ್ರಸ್ತಾವನೆಗೈದು ಸ್ವಾಗತಿಸಿದರು. ದಯಾನಂದ ಕಟೀಲು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next