Advertisement

Vettaiyan; ರಜನಿ 170ನೇ ಸಿನಿಮಾದ ಸಂಭಾವನೆ 250 ಕೋಟಿ!

03:15 PM Dec 14, 2023 | Team Udayavani |

ರಜನಿಕಾಂತ್‌ ನಟನೆಯ 170ನೇ ಸಿನಿಮಾದ ಟೈಟಲ್‌ ಘೋಷಣೆಯಾಗಿದೆ. ಚಿತ್ರಕ್ಕೆ “ವೆಟ್ಟೈಯನ್‌’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫ‌ಸ್ಟ್‌ಲುಕ್‌ನಲ್ಲಿ ರಜನಿ ಸ್ಟೈಲ್‌ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡುತ್ತಿದೆ. “ವೆಟ್ಟೈಯನ್‌’ ಸಿನಿಮಾದಲ್ಲಿನ ರಜನಿ ಸಂಭಾವನೆ ವಿಚಾರ ಸದ್ಯ ಜೋರು ಚರ್ಚೆಯಾಗುತ್ತಿದೆ.

Advertisement

ಅದಕ್ಕೆ ಕಾರಣ ದೊಡ್ಡ ಮೊತ್ತ. ಸದ್ಯ ಹಬ್ಬಿರುವ ಸುದ್ದಿ ಪ್ರಕಾರ, ಈ ಚಿತ್ರಕ್ಕೆ ರಜನಿಕಾಂತ್‌ ಬರೋಬ್ಬರಿ 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಒಂದು ವೇಳೆ ರಜನಿ ಇಷ್ಟೊಂದು ಸಂಭಾವನೆ ಪಡೆದರೆ ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ಹೊರ ಹೊಮ್ಮಲಿದ್ದಾರೆ.

ರಜನಿಕಾಂತ್‌ ಅವರ “ಜೈಲರ್‌’ ಚಿತ್ರ ಸೂಪರ್‌ ಹಿಟ್‌ ಆಗಿ ಸುಮಾರು 650 ಕೋಟಿ ರೂಪಾಯಿ ಬಿಝಿನೆಸ್‌ ಮಾಡಿತ್ತು. ಈ ಚಿತ್ರಕ್ಕಾಗಿ ರಜನಿಕಾಂತ್‌ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next