ಚಿಕ್ಕಜಾಜೂರು: ಸಾವನ್ನಪ್ಪಿದ ಹಸುವಿನ ಮರಣೋತ್ತರ ಪರೀಕ್ಷೆಗೆ ಲಂಚವನ್ನು ಕೇಳಿದ ಪಶು ವೈದ್ಯಾಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಮೃತ ಹಸುವಿನ ಪೋಸ್ಟ್ ಮಾರ್ಟ್ಂ ರಿಪೋರ್ಟ್ ನೀಡಲು ಪಶು ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ರೈತರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚವನ್ನು ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರೈತನಿಂದ 7 ಸಾವಿರ ರೂ. ಕೇಳಿದ ವೈದ್ಯ: ಚಿಕ್ಕಜಾಜೂರು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಈಗ ಕಂಬಿ ಹಿಂದಿದ್ದಾರೆ.
ಸುಮಾರು 5 ದಿನಗಳ ಹಿಂದೆ ಸಮೀಪದ ಕಾಗಳಗೆರೆ ಗ್ರಾಮದ ರೈತರಾದ ಎಸ್.ಸ್ವಾಮಿ ಎಂಬುವರ ಹಸು ಗಂಟಲು ಬೇನೆ ರೋಗಕ್ಕೆ ತುತ್ತಾಗಿ ಸತ್ತು ಹೋಗಿದ್ದು,ಸತ್ತ ಹಸುವಿನ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ನೀಡಲು ಚಿಕ್ಕಜಾಜೂರು ಪಶುವೈದ್ಯ ಡಾ|| ತಿಪ್ಪೇಸ್ವಾಮಿ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ, ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಶು ವೈದ್ಯಾಧಿಕಾರಿ ಮಂಗಳವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಚಿಕ್ಕಜಾಜೂರು ಪಶು ಆಸ್ಪತ್ರೆಯಲ್ಲಿ ಹಸುವಿನ ಮಾಲೀಕ ಸ್ವಾಮಿ ಅವರಿಂದ ಲಂಚ ಸ್ವೀಕಾರ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಚಿತ್ರದುರ್ಗ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ಮತ್ತು ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದರು.