Advertisement
ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞರಾದ ಪ್ರೊಫೆಸರ್ ಆರ್ಡಿಯನ್ ಟ್ರೋಡಿಫ್, ನಮೀಬಿಯಾ ಚೀತಾ ಸಂರಕ್ಷಣಾ ನಿಧಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಲಾರಿ ಮಾರ್ಕ್ ಸೇರಿ ನಾಲ್ವರ ಸಹಿ ಇರುವ ಪತ್ರದಲ್ಲಿ ಕುನೋದಲ್ಲಿರುವ ಚೀತಾ ಯೋಜನೆಯ ನಿರ್ವಹಣಾ ತಂಡಕ್ಕೆ ವೈಜ್ಞಾನಿಕ ತರಬೇತಿ ಹಾಗೂ ಅನುಭವಗಳೇ ಇಲ್ಲ. ತಜ್ಞರು ಹೇಳಿದರೂ ತಂಡ ಅವುಗಳನ್ನು ನಿರ್ಲಕ್ಷಿಸುತ್ತಿದೆ. ಚೀತಾಗಳಿಗೆ ಏನೇ ಆದರೂ ಅದನ್ನು ತಜ್ಞರ ಗಮನಕ್ಕೆ ಸಿಬ್ಬಂದಿ ತರುವುದೇ ಇಲ್ಲ ಎಂದಿದೆ. ಇನ್ನು ಪತ್ರಕ್ಕೆ ಸಹಿ ಹಾಕಿರುವ ನಾಲ್ವರಲ್ಲಿ ಇಬ್ಬರು ತಜ್ಞರು ಇದಕ್ಕೆ ತಮ್ಮ ಸಹಮತವಿಲ್ಲವೆಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆಷ್ಟೇ ಸರ್ಕಾರಕ್ಕೂ ತಜ್ಞರ ತಂಡ ವರದಿ ಸಲ್ಲಿಸಿದ್ದು, ದೊಡ್ಡ ಚೀತಾಗಳಿಗೆ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ ಸಾಧ್ಯ. ಈ ಹಿನ್ನೆಲೆ ಮರಿ ಚೀತಾಗಳನ್ನು ಹೊಂದುವ ಬಗ್ಗೆ ಸರ್ಕಾರ ಗಮನಹರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಬುಧವಾರವಷ್ಟೇ ಕುನೋದಲ್ಲಿ ನಮೀಬಿಯಾದಿಂದ ತಂದಿದ್ದ 9ನೇ ಚೀತಾ ಮೃತಪಟ್ಟಿತ್ತು.