Advertisement

ಏಷ್ಯಾಡ್‌ನಿಂದ ಹೊರನಡೆದ ತಾರೆ ಲಿಯಾಂಡರ್‌ ಪೇಸ್‌

06:00 AM Aug 17, 2018 | |

ಪಾಲೆಂಬಾಂಗ್‌: ಏಷ್ಯಾಡ್‌ನ‌ಲ್ಲಿ ಲಿಯಾಂಡರ್‌ ಪೇಸ್‌ ಆಡುತ್ತಾರಾ ಇಲ್ಲವಾ ಎಂಬ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ. ಅವರು ಕೂಟದಿಂದ ಹೊರ ನಡೆದಿದ್ದಾರೆ. ಇದಕ್ಕೂ ಮುನ್ನ ಅವರು ಏಷ್ಯನ್‌ ಗೇಮ್ಸ್‌ಗೆ ಹೋಗುತ್ತಾರೋ, ಇಲ್ಲವೋ ಎನ್ನುವುದರ ಬಗ್ಗೆಯೇ ಅನುಮಾನವಿತ್ತು. ಸ್ವತಃ ಭಾರತ ತಂಡದ ಕೋಚ್  ಜೀಶನ್‌ ಅಲಿಗೇ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂಬು ದೊಂದು ವಿಪರ್ಯಾಸ!

Advertisement

ಭಾರತದ ಟೆನಿಸ್‌ ತಂಡ ಈಗಾಗಲೇ ಏಷ್ಯಾಡ್‌ನ‌ಲ್ಲಿ ಪಾಲ್ಗೊಳ್ಳಲು ಪಾಲೆಂಬಾಂಗ್‌ಗೆ ತೆರಳಿತ್ತು. ಅದರಲ್ಲಿ ಲಿಯಾಂಡರ್‌ ಪೇಸ್‌ ಕಾಣಿಸಿರಲಿಲ್ಲ. ಅದು ಆಗಲೇ ಅನುಮಾನಕ್ಕೆ ಕಾರಣವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಭಾರತದ ಕೋಚ್‌ ಜೀಶನ್‌ ಅಲಿ,”ಲಿಯಾಂಡರ್‌ ಪೇಸ್‌ ಆಗಮನದ ಬಗ್ಗೆ ನನಗೆ ಯಾವುದೇ
ಮಾಹಿತಿ ಇಲ್ಲ. ಇದಕ್ಕೆ ಕೇವಲ ಪೇಸ್‌ ಅವರಷ್ಟೇ ಉತ್ತರ ಕೊಡಬಲ್ಲರು. ನಾನು ಕೊನೆಯ ಸಲ ಪೇಸ್‌ ಜತೆ ಮಾತಾಡಿದಾಗ, ಸಿನ್ಸಿನಾಟಿ ಕೂಟದಲ್ಲಿ ಆಡಿ ನೇರವಾಗಿ ಪಾಲೆಂಬಾಂಗ್‌ಗೆ ಆಗಮಿಸುವುದಾಗಿ ಹೇಳಿದ್ದರು. ಈಗ ಅವರು ಸಿನ್ಸಿನಾಟಿಯಲ್ಲೂ ಆಡುತ್ತಿಲ್ಲ…’ ಎಂದಿದ್ದಾರೆ.

ಭಾರತದ ಟೆನಿಸ್‌ನಲ್ಲಿ ಯಾವುದೂ ಸರಿ ಇಲ್ಲ ಎಂಬುದಕ್ಕೆ ಈ ಹೇಳಿಕೆ ಸಾಕ್ಷಿ. 18 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ 45ರ ಹರೆಯದ ಲಿಯಾಂಡರ್‌ ಪೇಸ್‌ ಏಷ್ಯಾಡ್‌ ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಇವರ ಜಾಗದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದು ಸದ್ಯದ ಪ್ರಶ್ನೆ. ಏಷ್ಯಾಡ್‌ನ‌ಲ್ಲಿ 5 ಚಿನ್ನದ ಪದಕ ಗೆದ್ದ ಸಾಧನೆ ಲಿಯಾಂಡರ್‌ ಪೇಸ್‌ ಅವರಾªಗಿದೆ. 1994ರ ಹಿರೋಶಿಮದಲ್ಲಿ ಅವರು ಮೊದಲ ಏಷ್ಯಾಡ್‌ ಚಿನ್ನ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next