Advertisement

RSS ಹಿರಿಯ ನಾಯಕ, ಬಹು ಭಾಷಾ ಲೇಖಕ ಆರ್.ಹರಿ ವಿಧಿವಶ

04:43 PM Oct 29, 2023 | Vishnudas Patil |

ಕೊಚ್ಚಿ: ಆರ್‌ಎಸ್‌ಎಸ್‌ನ ಹಿರಿಯ ನಾಯಕ, ಮಾಜಿ ಬೌದ್ಧಿಕ್ ಪ್ರಮುಖ್ ಆರ್. ಹರಿ ವಯೋಸಹಜ ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ.

Advertisement

93 ರ ಹರೆಯದ ಆರ್‌ಎಸ್‌ಎಸ್ ಪ್ರಚಾರಕ ಅವರು ಸಿದ್ಧಾಂತವಾದಿ, ಸಮೃದ್ಧ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಸಂಘದ ಕಾರ್ಯಕರ್ತರಲ್ಲಿ ಹರಿ ಈಟ್ಟನ್ (ಅಣ್ಣ) ಅಥವಾ ಹರಿಜಿ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಿದ್ದ ರಂಗ ಹರಿ, ಸಂಘ ಪರಿವಾರ ಮತ್ತು ಅದರ ಸಿದ್ಧಾಂತದ ಪ್ರಚಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರು.

ಆರ್‌ಎಸ್‌ಎಸ್‌ನಲ್ಲಿ ಉನ್ನತ ನಾಯಕತ್ವದ ಸ್ಥಾನವನ್ನು ಪಡೆದ ಕೇರಳದ ಮೊದಲ ಪ್ರಚಾರಕರಾಗಿದ್ದರು. ಎರ್ನಾಕುಲಂ ಜಿಲ್ಲೆಯವರಾದ ಹರಿ ಅವರು ತಮ್ಮ ಕಾಲೇಜು ದಿನಗಳಿಂದಲೂ ಆರ್‌ಎಸ್‌ಎಸ್ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಪೂರ್ಣ ಕಾಲಿಕ ಸಂಘದ ಕಾರ್ಯಕರ್ತರಾದರು.ಪ್ರಮುಖ ಸಂಘ ಪತ್ರಿಕೆ ‘ಕುರುಕ್ಷೇತ್ರ’ ಪ್ರಕಟಣೆಯ ಮುಖ್ಯಸ್ಥರಾಗಿದ್ದರು.

ಆರ್‌ಎಸ್‌ಎಸ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ ನಂತರ, ಅವರು 1990 ರಿಂದ 15 ವರ್ಷಗಳ ಕಾಲ ಸಂಘಟನೆಯ ಅಖಿಲ ಭಾರತೀಯ ಬೌದ್ಧಿಕ ಪ್ರಮುಖ್ ಆಗಿ ಸೇವೆ ಸಲ್ಲಿಸಿದ್ದರು. ಏಷ್ಯಾ ಮತ್ತು ಆಸ್ಟ್ರೇಲಿಯದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿದ್ದರು. ಮಲಯಾಳಂನಲ್ಲಿ 43 ಪುಸ್ತಕಗಳು, ಹಿಂದಿಯಲ್ಲಿ 11 ಪುಸ್ತಕಗಳು ಮತ್ತು ಇಂಗ್ಲಿಷ್ ನ ಲ್ಲಿ 2 ಪುಸ್ತಕಗಳನ್ನು ಬರೆದಿದ್ದರು.

ಮಲಯಾಳಂ ಮತ್ತು ಇಂಗ್ಲಿಷ್ ಜೊತೆಗೆ ಹಿಂದಿ, ಸಂಸ್ಕೃತ, ಗುಜರಾತಿ, ತಮಿಳು, ಬೆಂಗಾಲಿ ಮತ್ತು ಅಸ್ಸಾಮಿ ಸೇರಿದಂತೆ ಬಹು ಭಾಷೆಗಳಲ್ಲಿ ಪಾರಂಗತರಾಗಿದ್ದ ಹರಿ ಅವರು ತಮ್ಮ ಮಾತೃಭಾಷೆಯಾದ ಮಲಯಾಳಂ ಭಾಷೆಗೆ ವಿವಿಧ ಭಾಷೆಗಳಲ್ಲಿ ಹಲವಾರು ಪುಸ್ತಕಗಳನ್ನು ಅನುವಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next