ಮುಂಬೈ: ಮರಾಠಿ ಚಿತ್ರ ರಂಗದ ಹಿರಿಯ ನಟ ರವಿ ಪಟವರ್ಧನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು.
ಶನಿವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಅವರಿಗೆ ರಾತ್ರಿ 9.30ರ ಅವಧಿಯಲ್ಲಿ ಹೃದಯಾಘಾತ ಉಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ ಎಂದು ಪುತ್ರ ನಿರಂಜನ ಪಟವರ್ಧನ್ ಹೇಳಿದ್ದಾರೆ.
ಮರಾಠಿ ಕಾರ್ಯಕ್ರಮ “ಅಗ್ಗಬಾಯಿ ಸಸುಬಾಯಿ’ ಜನಪ್ರಿಯತೆ ಪಡೆದಿತ್ತು. 1980ರ ಹಿಂದಿ ಸಿನಿಮಾಗಳಾದ “ತೇಝಾಬ್’, “ಅಂಕುಶ್’ ಸೇರಿ ಸುಮಾರು 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ:ರೈತರ ಬೇಡಿಕೆ ಈಡೇರಿಸದಿದ್ದರೇ ಖೇಲ್ ರತ್ನ ಪ್ರಶಸ್ತಿ ಹಿಂದಿರುಗಿಸುತ್ತೇನೆ: ವಿಜೇಂದರ್ ಸಿಂಗ್
ಪ್ರತಿ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದರು, ಇಂದು ನಾವು ಒಬ್ಬ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಈ ಹಿರಿಯ ವಯಸ್ಸಿನಲ್ಲೂ ಸಿನಿಮಾ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.ಅವರ ಅಗಲಿಕೆಯಿಂದ ನಾಟಕ ಮತ್ತು ಚಲನಚಿತ್ರೋದ್ಯಮಕ್ಕೆ ದೊಡ್ಡ ನಷ್ಟವಾಗಿದೆ. ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರವಿ ಪಟವರ್ಧನ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.