Advertisement

ಶತಾಯುಷಿ ,ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮದನ್‌ ಮಾಸ್ಟರ್‌ ಇನ್ನಿಲ್ಲ 

11:09 AM Mar 28, 2017 | |

ಕಾಸರಗೋಡು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ್‌ ಮಾಸ್ಟರ್‌ ಅವರು ಮಂಗಳವಾರ ಪೆರ್ಲದ ಸೆರಾಜೆಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

Advertisement

ಇತ್ತೀಚಿಗಿನ ವರೆಗೆ ಲವಲವಿಕೆಯಿಂದ ಇದ್ದ ಅವರು  ವಾರ್ಧಕ್ಯದಿಂದ ನಿಧನ ಹೊಂದಿದ್ದಾರೆ. ಜನವರಿ 2 ರಂದು 100 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು.

ಕ್ವೀಟ್‌ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಹೋರಾಟದಲ್ಲಿ ಧುಮುಕಿ ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಮಹಾತ್ಮಾ ಗಾಂಧೀಜಿ ಜೊತೆಯೂ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

 ಶಿಕ್ಷಕರಾಗಿ, ಹಾಗೂ  ಸೇನೆಯಲ್ಲಿ ಕಾರ್ಯನಿವರ್ಹಿಸಿದ್ದ ಮದನ ಮಾಸ್ಟರ್ ಅವರು ರಾಜಿ ಪಂಚಾಯಿತಿಯ ಮದ್ಯಸ್ಥಿಕೆದಾರರಾಗಿ ಗಡಿನಾಡಿನಲ್ಲಿ ಜನಪ್ರಿಯತೆ ಪಡೆದವರು.
ಪ್ರಗತಿಪರ ಕೃಷಿಕರಾಗಿದ್ದ ಮದನ ಮಾಸ್ಟರ್ ಅವರು ಸ್ಥಳೀಯವಾಗಿ ಜೇಣು ಸಾಕಾಣಿಕೆಯನ್ನು ಜನಪ್ರಿಯಗೊಳಿಸಿದವರು ಗಡಿನಾಡಿನಲ್ಲಿ ಕನ್ನಡಪರ ಸಂಘಟನೆ, ಸಹಕಾರಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು.

ಸುಧಾರಣೆ ಕಾನೂನು ಅನುಷ್ಠಾನಕ್ಕೆ ಸ್ವಯಂ ಪ್ರೇರಿತರಾಗಿ ದುಡಿದಿದ್ದ ಮದನ ಮಾಸ್ತರ್ ಅವರು ಗಡಿನಾಡಿನಲ್ಲಿ ನೂರಾರು ಹಿಡುವಳಿದಾರರಿಗೆ ಜಮೀನು ಒದಗಿಸಿಕೊಡುವಲ್ಲಿ ಶ್ರಮಿಸಿದ್ದರು.
ಖಾದಿ ಉಡುಪನ್ನಷ್ಟೇ ಧರಿಸುತ್ತಿದ್ದ ಮದನ ಮಾಸ್ಟರ್ ಅವರು ಪ್ರಖರ ಗಾಂಧೀವಾದಿಯಾಗಿದ್ದರು.

Advertisement

ಕಳೆದ ಗಾಂಧಿ ಜಯಂತಿಯ ದಿನದಂದು ದ.ಕ.ಜಿಲ್ಲಾಡಳಿತವು ಕೆ.ಪಿ.ಮದನ ಮಾಸ್ಟರ್ ಅವರನ್ನು ಮಂಗಳೂರು ಗಾಂಧಿ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿತ್ತು.

ಮಾಸ್ಟರ್‌ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next