Advertisement
ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನ ಹಿರಿಯ ನಿರ್ದೇಶಕ ಎಸ್ಮಾಯೆಲ್ ಶ್ರಾಫ್ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
Related Articles
Advertisement
ಅಹಿಸ್ತಾ ಅಹಿಸ್ತಾ, ಜಿದ್, ಅಗರ್, ಗಾಡ್ ಅಂಡ್ ಗನ್, ಪೋಲಿಸ್ ಪಬ್ಲಿಕ್, ಮಜ್ಧಾರ್, ದಿಲ್ ಅಖೀರ್ ದಿಲ್ ಹೈ, ಬುಲಂದಿ, ನಿಶ್ಚೈ, ಜುಟಾ ಸಚ್ ನಂತಹ ಅನೇಕ ಬಾಲಿವುಡ್ ಚಲನಚಿತ್ರಗಳನ್ನು ಎಸ್ಮಾಯೆಲ್ ಶ್ರಾಫ್ ನಿರ್ದೇಶಿಸಿದ್ದಾರೆ. ನಿರ್ದೇಶಕರಾಗಿ ಅವರ ಕೊನೆಯ ಚಿತ್ರ ಥೋಡಾ ತುಮ್ ಬದ್ಲೋ ಥೋಡಾ ಹಮ್ 2004 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಆರ್ಯ ಬಬ್ಬರ್ ಮತ್ತು ಶ್ರಿಯಾ ಸರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು