ದೊಡ್ಡಬಳ್ಳಾಪುರ : ರಂಗಭೂಮಿ ಕಲಾವಿದ ದಿವಂಗತ ಗುಬ್ಬಿವೀರಣ್ಣ ಅವರ ಪುತ್ರಿ ಹೇಮಲತಾ(70) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಹೇಮಲತಾ ಅವರು ಲಘು ಹೃದಯಾಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು (ಶನಿವಾರ) ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದರು.
ಹೇಮಲತಾ ಅವರು ಒಬ್ಬ ಭರತನಾಟ್ಯ ಕಲಾವಿದೆ, ಅಲ್ಲದೆ ಹಲವು ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ, ಕಲ್ಯಾಣ್ ಕುಮಾರ್ ನಟನೆಯ ‘ಕಲಾವತಿ’ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದಾರೆ, ಡಾ. ರಾಜ್ ಕುಮಾರ್ ಜೊತೆ ‘ಎಮ್ಮೆ ತಮ್ಮಣ್ಣ’ ಚಿತ್ರದಲ್ಲೂ ನಟಿಸಿದ್ದರು.
Related Articles
ಇವರಿಗೆ ಮೂವರು ಮಕ್ಕಳಿದ್ದು ಅಮೆರಿಕಾದಲ್ಲಿ ನೆಲಸಿದ್ದಾರೆ. ಹೆಸರಘಟ್ಟದಲ್ಲಿರು ಖಾಸಗಿ ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಇದನ್ನೂ ಓದಿ : ದೆಹಲಿಯಲ್ಲಿ ದುಷ್ಕರ್ಮಿಗಳಿಂದ ಗುಂಡಿಕ್ಕಿ ಬಿಲ್ಡರ್ ಬರ್ಬರ ಹತ್ಯೆ