Advertisement

ಹಿರಿಯ ಕಾಂಗ್ರೆಸ್‌ ನಾಯಕ ಮೋತಿ ಲಾಲ್‌ ವೋರಾ ಹಂಗಾಮಿ ಎಐಸಿಸಿ ಅಧ್ಯಕ್ಷ

12:49 PM Jul 04, 2019 | Sathish malya |

ಹೊಸದಿಲ್ಲಿ : 90ರ ಹರೆಯದ ಹಿರಿಯ ಕಾಂಗ್ರೆಸ್‌ ನಾಯಕ ಮೋತಿ ಲಾಲ್‌ ವೋರಾ ಅವರನ್ನು ಹಂಗಾಮಿ ಎಐಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Advertisement

1928ರ ಡಿಸೆಂಬರ್‌ 20ರಂದು ಜನಿಸಿದ್ದ ವೋರಾ ಅವರು ಈ ಹಿಂದೆ ಎರಡು ಅವಧಿಯಲ್ಲಿ ಮಧ್ಯ ಪ್ರದೇಶ ಮುಖ್ಯಮಂತ್ರಿಗಳಾಗಿದ್ದರು.

ಇದಕ್ಕೆ ಮುನ್ನ ರಾಹುಲ್‌ ಗಾಂಧಿ ಅವರು, “ನಾನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ; ಅಂತೆಯೇ ನಾನೀಗ ಪಕ್ಷದ ಅಧ್ಯಕ್ಷನಲ್ಲ; ಆದುದರಿಂದ ಪಕ್ಷ ಬೇಗನೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು’ ಎಂದು ರಾಹುಲ್‌ ಗಾಂಧಿ ತಮ್ಮ ಪಕ್ಷಕ್ಕೆ ಖಡಾಖಂಡಿತವಾಗಿ ಹೇಳಿದ್ದರು.

“ಕಾಂಗ್ರೆಸ್‌ ಪಕ್ಷ ಆದಷ್ಟು ಬೇಗನೆ ಹೊಸ ಅಧ್ಯಕ್ಷರನ್ನು ಚುನಾಯಿಸಬೇಕು; ನಾನಂತೂ ಆ ಪ್ರಕ್ರಿಯೆಯಲ್ಲಿ ಇಲ್ಲವೇ ಇಲ್ಲ; ಪಕ್ಷ ಇನ್ನಷ್ಟು ವಿಳಂಬಿಸದೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ರಾಹುಲ್‌ ಗಾಂಧಿ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next