ಬೀಜಿಂಗ್: ಭೂಮಿಯಲ್ಲಿನ ಕುಳಿಯೊಂದರೊಳಗೆ ಸದ್ದಿಲ್ಲದೇ ದಟ್ಟ ಅರಣ್ಯ ವೊಂದು ಬೆಳೆದರೆ…?
ಚೀನದ ಗುವಾಂಗ್‌ಕ್ಸಿ ಪ್ರದೇಶದಲ್ಲಿ ಇಂಥದ್ದೊಂದು ವಿಸ್ಮಯ ಪತ್ತೆಯಾಗಿದೆ. ಗುಹೆ ಅನ್ವೇಷಕರು ಈ ಪ್ರದೇಶದ ಬೃಹತ್ ಸಿಂಕ್‌ಹೋಲ್‌ನಲ್ಲಿ ಸಮೃದ್ಧವಾಗಿ ಬೆಳೆದಿ ರುವ ಅರಣ್ಯವೊಂದನ್ನು ಪತ್ತೆಹಚ್ಚಿದ್ದಾರೆ.
ಈ ಕುಳಿಯು 630 ಅಡಿ ಆಳವಿದ್ದು, 176 ದಶಲಕ್ಷ ಕ್ಯೂಬಿಕ್ ಅಡಿಗೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ವಿಶೇಷ ವೆಂದರೆ, ಭೂಮಿಯಾಳದ ಈ ಅರಣ್ಯ ದಲ್ಲಿ 130 ಮೀಟರ್‌ನಷ್ಟು ಎತ್ತರದ ಬಹಳಷ್ಟು ಮರಗಳಿವೆ. ಅಷ್ಟೇ ಅಲ್ಲ, ಇಲ್ಲಿ ವೈಜ್ಞಾನಿಕ ಜಗತ್ತು ಈ ಹಿಂದೆ ಎಲ್ಲೂ ಕಂಡಿರದಂಥ ವಿಶಿಷ್ಟ ಜೀವಿಗಳು ವಾಸವಿರಬಹುದು ಎಂದು ಚೀನದ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸುಂದರವೂ, ಅಪಾಯಕಾರಿಯೂ: ದಕ್ಷಿಣ ಚೀನದಲ್ಲಿ ಈ ರೀತಿಯ ಕುಳಿಗಳಿಗೆ ಗುವಾಂಗ್‌ಕ್ಸಿ ಪ್ರದೇಶ ಜನಪ್ರಿಯವಾಗಿದ್ದು, ಇಲ್ಲಿರುವ 30 ಕುಳಿಗಳ ಪೈಕಿ ಇದು ಅತ್ಯಂತ ದೊಡ್ಡದು.
ಸ್ಥಳೀಯರು ಇದನ್ನು ಶೆನ್ಯಾಂಗ್ ಟಿಯಾಂಕೆಂಗ್ ಅಥವಾ “ತಳವಿಲ್ಲದ ಗುಂಡಿ’ ಎಂದು ಹೆಸರಿಸಿದ್ದಾರೆ. ಇದು ನೋಡಲು ರಮಣೀಯವಾಗಿದ್ದರೂ ಅತ್ಯಂತ ಭಯಾನಕ ಹಾಗೂ ಅಪಾಯಕಾರಿಯೂ ಆಗಿರಬಹುದು ಎಂದೂ ಹೇಳಲಾಗಿದೆ.
ಪತ್ತೆಯಾಗಿದ್ದು ಎಲ್ಲಿ?: ಚೀನದ ಗುವಾಂಗ್‌ಕ್ಸಿ ಪ್ರದೇಶದಲ್ಲಿ
630 ಅಡಿ ಭೂ ಕುಳಿಯ ಆಳ
176 ದಶಲಕ್ಷ ಕ್ಯೂಬಿಕ್ ಅಡಿ ವಿಸ್ತೀರ್ಣ
130 ಮೀಟರ್ ಇಲ್ಲಿರುವ ಮರಗಳ ಎತ್ತರ
30 ಈ ಪ್ರದೇಶದಲ್ಲಿರುವ ಒಟ್ಟು ಭೂ ಕುಳಿಗಳು