Advertisement

ಸ್ಮಾರ್ಟ್‌ ನಗರಿಯಲ್ಲೂ ಸ‌ೃಷ್ಟಿಯಾಗಲಿ ವರ್ಟಿಕಲ್‌ ಅರಣ್ಯ

12:09 AM May 05, 2019 | Sriram |

ಅತಿಯಾದ ಪಾಸ್ಟಿಕ್‌ ಬಳಕೆ, ಗಾಳಿ, ನೀರು ಮೊದಲಾದ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳುಗಡವುತ್ತಿರುವ ಮಾನವ ಇದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾನೆ ಕೂಡ. ಇತ್ತೀಚೆಗೆ ಪರಿಸರ ರಕ್ಷಣೆಯ ಕುರಿತು ಅನೇಕ ಜಾಗೃತಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಅದು ಫ‌ಲಕಾರಿಯಾಗದೇ ಇರುವುದು ವಿಪರ್ಯಾಸ.

Advertisement

ಭವಿಷ್ಯದಲ್ಲಿ ಉಸಿರಾಡಲು ಶುದ್ಧ ಆಮ್ಲಜನಕಕ್ಕೂ ಮಾನವ ಪರದಾಡಬೇಕಾದ ಪರಿಸ್ಥಿತಿ ಬಂದೊದಗುವ ಸಾಧ್ಯತೆಗಳಿವೆ. ಪರಿಸರ ರಕ್ಷಣೆ ವಿಷಯದಲ್ಲಿ ಒಂದು ಹೊಸ ಕಲ್ಪನೆ ವರ್ಟಿಕಲ್‌ ಅರಣ್ಯ.

ಈ ವರ್ಟಿಕಲ್‌ ಅರಣ್ಯದ ನೆರವಿನಿಂದ ಜೀವಸಂಕುಲಕ್ಕೆ ಉಸಿರಾಡಲು ಶುದ್ಧ ಗಾಳಿಯ ಸೃಷ್ಟಿಯಾಗುತ್ತದೆ. ಈಗಾಗಲೇ ವಿದೇಶಗಳಲ್ಲಿ, ಭಾರತದ ಕೆಲವು ಕಡೆಗಳಲ್ಲಿ ಈ ವರ್ಟಿಕಲ್‌ ಅರಣ್ಯ ಯೋಜನೆ ಜಾರಿಯಾಗಿದ್ದು, ಕಟ್ಟಡಗಳಲ್ಲೇ ಗಿಡಮರಗಳನ್ನು ಬೆಳೆಸಿ ಶುದ್ಧ ಆಮ್ಲಜನಕದ ಸೃಷ್ಟಿಗೆ ಕಾರಣವಾಗುತ್ತದೆ. ಈ ವರ್ಟಿಕಲ್‌ ಅರಣ್ಯದಿಂದ ಪ್ರತಿದಿನ 132 ಪೌಂಡ್‌ಗಳಷ್ಟು (60 ಕೆ.ಜಿ.) ಶುದ್ಧ ಆಮ್ಲಜನಕವು ಉತ್ಪತ್ತಿಯಾಗುತ್ತದೆ.

ಏನಿದು ವರ್ಟಿಕಲ್‌ ಅರಣ್ಯ?
ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣದಿಂದ ಗಿಡಮರಗಳನ್ನು ಬೆಳೆಸಲು ಸ್ಥಳವಕಾಶಗಳೇ ಇಲ್ಲ. ಹೀಗಿರುವಾಗ ಗಿಡಮರಗಳಿಗಾಗಿ ಮನೆ ನಿರ್ಮಾಣ ಮಾಡುವುದೇ ವರ್ಟಿಕಲ್‌ ಅರಣ್ಯ. ಈ ಯೋಜನೆಯ ಮೂಲಕ ಕಟ್ಟಡಗಳಲ್ಲಿ ಗಿಡಮರಗಳ ಬೆಳೆಸಿ ಅವುಗಳನ್ನು ಪೋಷಿಸುವುದರಿಂದ ವಾತಾವರಣವೂ ಕೂಡ ತಂಪಾಗಿರುವುದಲ್ಲದೇ ಜಾಗತಿಕ ತಾಪಮಾನದ ಏರಿಕೆಯ ಪ್ರಮಾಣವನ್ನು ಕಡಿಮೆ ಮಾಡುಬಹುದಾಗಿದೆ. ನಗರದ ಪರಿಸರಕ್ಕೆ ಸೂಕ್ತವಾದ ಸಸ್ಯಗಳನ್ನು ಆಯ್ಕೆ ಮಾಡುವ ಮೂಲಕ ಈ ಪ್ರಕ್ರಿಯೆಯು ಆರಂಭವಾಗುತ್ತದೆ. ಇದರಿಂದ ಮರಗಳಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತದೆ. ಪ್ರಪಂಚದಾದ್ಯಂತ ಈ ಕಲ್ಪನೆಯೂ ಜಾರಿಯಾಗುತ್ತಿರುವುದರಿಂದ ಪರಿಸರ ರಕ್ಷಣೆಗೆ ಸಹಕರಿಯಾಗುತ್ತಿದೆ.

ಆರಂಭವಾಗಿದ್ದು ಇಟಲಿಯಲ್ಲಿ
ಈ ಯೋಜನೆ ಮೊದಲು ಕಾರ್ಯಗತವಾಗಿದ್ದು ಇಟಲಿಯಲ್ಲಿ. ಇದಕ್ಕೆ ಬೊಸ್ಕೊ ವರ್ಟಿಕಲೆ ಎಂದು ಹೆಸರಿಡಲಾಗಿತ್ತು. ಇಂಗ್ಲಿಷ್‌ನಲ್ಲಿ ವರ್ಟಿಕಲ್‌ ಫಾರೆಸ್ಟ್‌ ಎಂದು ಕರೆಯಾಲಾಗುತ್ತದೆ. ಈ ಟವರ್‌ ಹೌಸ್‌ನಲ್ಲಿ 900 ಮರಗಳು, 5,000 ಪೊದೆಗಳು ಮತ್ತು 11,000 ಹೂವಿನ ಸಸ್ಯಗಳಿವೆ. ಇದು ಹೊಗೆಯನ್ನು ತಗ್ಗಿಸಿ
ಆಮ್ಲಜನಕವನ್ನು ಉತ್ಪತ್ತಿ ಮಾಡಲು ಸಹಕರಿಸುತ್ತವೆ. ಇದರಲ್ಲಿ90ಕ್ಕಿಂತಲೂ ಹೆಚ್ಚಿನ ಜಾತಿಗಳ ಗಿಡಗಳಿದ್ದು, ಹಕ್ಕಿ ಮತ್ತು ಕೀಟಗಳನ್ನು ನಗರಕ್ಕೆ ಆಕರ್ಷಿಸುತ್ತವೆ. ಕಟ್ಟಡದ ಒಳಾಂಗಣದಲ್ಲಿ ಸೂರ್ಯನ ತಾಪಾಮಾನವನ್ನು ಬೇಸಗೆಯಲ್ಲಿ ಮಂದಗೊಳಿಸುತ್ತದೆ. ಶಬ್ದ ಮಾಲಿನ್ಯ ಮತ್ತು ಧೂಳಿನಿಂದ ಆಂತರಿಕ ಸ್ಥಳಗಳನ್ನು ಸಸ್ಯಗಳು ರಕ್ಷಿಸುತ್ತವೆ. ಈ ಕಟ್ಟಡವು ಸೌರ ಫ‌ಲಕಗಳಿಂದ ನವೀಕರಿಸಬಹುದಾದ ಶಕ್ತಿಯನ್ನು ಬಳಸಿ ಮತ್ತು ಕಟ್ಟಡಗಳ ಜೀವತಾವಧಿಯನ್ನು ಉಳಿಸಿಕೊಳ್ಳಲು ತ್ಯಾಜ್ಯ ನೀರನ್ನು ಫಿಲ್ಟರ್‌ ಮಾಡುವುದರ ಮೂಲಕ ಸ್ವಾವಲಂಬಿಯಾಗಿದೆ.

Advertisement

ಮಂಗಳೂರಿಗೂ ಬರಲಿ
ಮೊಟ್ರೋಪಾಲಿಟನ್‌ ನಗರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ದಿನೇ ದಿನೇ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ವೇಳೆ ಮಂಗಳೂರಿನಲ್ಲೂ ವರ್ಟಿಕಲ್‌ ಅರಣ್ಯ ಯೋಜನೆ ಜಾರಿಯಾದರೇ ಮಂಗಳೂರು ಹಚ್ಚ ಹಸುರಿನಿಂದ ತುಂಬಿ ಶುದ್ಧ ಗಾಳಿಯೂ ಕೂಡ ಲಭ್ಯವಾಗಲಿದೆ. ಇದರೊಂದಿಗೆ ಪಕ್ಷಿ ಸಂಕುಲಕ್ಕೂ ಉಪಯುಕ್ತವಾದ ಪರಿಸರ ನಿರ್ಮಾಣವಾಗುವುದು. ಈ ಯೋಜನೆ ದುಬಾರಿಯೇನಲ್ಲ. ಹೀಗಾಗಿ ಎಲ್ಲಿ ಬೇಕಾದರೂ, ಯಾರು ಬೇಕಾದರೂ ಇದನ್ನು ನಿರ್ಮಿಸಬಹುದಾಗಿದೆ.

– ರಮ್ಯಾ ಕೆದಿಲಾಯ

Advertisement

Udayavani is now on Telegram. Click here to join our channel and stay updated with the latest news.

Next