ಮುಂಬೈ: ವರ್ಸೋವಾ-ಬಾಂದ್ರಾ ಸೀ ಲಿಂಕ್ ಅನ್ನು ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವಾ ಶೇವಾ ಅಟಲ್ ಸೇತು ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.
ಹಿಂದೂ ರಾಷ್ಟ್ರೀಯವಾದಿ ನಾಯಕ ವೀರ್ ಸಾವರ್ಕರ್ (ವಿನಾಯಕ ದಾಮೋದರ್ ಸಾವರ್ಕರ್) ಅವರ ಹೆಸರನ್ನು ವರ್ಸೋವಾ-ಬಾಂದ್ರಾ ಸೀ ಲಿಂಕ್ ಗೆ ಇಡಲು ಶಿಂಧೆ ಸರ್ಕಾರ ನಿರ್ಧರಿಸಿದೆ.
ಕಳೆದ ತಿಂಗಳು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಾವರ್ಕರ್ 140 ನೇ ಜನ್ಮ ವಾರ್ಷಿಕೋತ್ಸವದಂದು ವರ್ಸೋವಾ-ಬಾಂದ್ರಾ ಸೀ ಲಿಂಕ್ ಗೆ ಸಾವರ್ಕರ್ ಹೆಸರನ್ನು ಇಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ:Anna Bhagya ; ಅಕ್ಕಿ ಸಂಗ್ರಹವಾಗುವವರೆಗೆ ಹಣ ನೀಡಲು ತೀರ್ಮಾನಿಸಿದ ಸರಕಾರ
ಮುಂಬರುವ ವರ್ಸೋವಾ-ಬಾಂದ್ರಾ ಸೀ ಲಿಂಕ್ ಕರಾವಳಿ ರಸ್ತೆ ಯೋಜನೆಯ ಭಾಗವಾಗಿ ಅಂಧೇರಿಯನ್ನು ಬಾಂದ್ರಾ-ವರ್ಲಿ ಸೀ ಲಿಂಕ್ ಸಂಪರ್ಕಿಸುತ್ತದೆ. ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) 12 ರಿಂದ 15 ನಿಮಿಷಗಳ ಪ್ರಯಾಣದ ಸಮಯದೊಂದಿಗೆ ಮುಂಬೈಯನ್ನು ಮುಖ್ಯ ಭಾಗಕ್ಕೆ ಸಂಪರ್ಕಿಸುತ್ತದೆ.
ಈ ನಿರ್ಧಾರವನ್ನು ಪ್ರಕಟಿಸಿದ ಬಿಜೆಪಿಯ ಹಿರಿಯ ನಾಯಕ ಮತ್ತು ಸಚಿವ ಸುಧೀರ್ ಮುಂಗಂತಿವಾರ್ ಅವರು, ಸೇತುವೆಗಳಿಗೆ ರಾಷ್ಟ್ರದ ಇಬ್ಬರು ಮಹಾನ್ ವ್ಯಕ್ತಿಗಳ ಹೆಸರನ್ನು ಮರುನಾಮಕರಣ ಮಾಡಿರುವುದರಿಂದ ಯಾವುದೇ ವಿವಾದ ಬೇಡ ಎಂದು ಹೇಳಿದರು.