Advertisement
ಹಾಗಲಕಾಯಿ ಮಸಾಲ ಫ್ರೈಬೇಕಾಗುವ ಸಾಮಗ್ರಿ: ಹಾಗಲಕಾಯಿ- ಎರಡು, ಕೆಂಪು ಮೆಣಸಿನಪುಡಿ- ಒಂದು ಚಮಚ, ಹುಣಸೆಹಣ್ಣು- ಮೂರು ಚಮಚ, ಬೆಲ್ಲ- ಎಂಟು ಚಮಚ, ಗರಂಮಸಾಲ- ಒಂದು ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ, ಅರಸಿನ- ಅರ್ಧ ಚಮಚ, ಉಪ್ಪು ರುಚಿಗೆ.
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಹಾಗಲಕಾಯಿ- ಅರ್ಧ ಕಪ್, ತೆಂಗಿನತುರಿ- ಒಂದು ಕಪ್, ಸಾಸಿವೆ- ಒಂದು ಚಮಚ, ಹಸಿಮೆಣಸು- ಒಂದು, ಮೊಸರು- ಒಂದು ಕಪ್, ಉಪ್ಪು ರುಚಿಗೆ.
Related Articles
ಹಾಗಲಕಾಯಿ ವಿದ್ ದಾಳಿಂಬೆ ಸಲಾಡ್
Advertisement
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಹಾಗಲಕಾಯಿ- ಅರ್ಧ ಕಪ್, ತೆಂಗಿನತುರಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಹಸಿಮೆಣಸಿನಕಾಯಿ- ಒಂದು, ಕ್ಯಾರೆಟ್‌ತುರಿ- ನಾಲ್ಕು ಚಮಚ, ದಾಳಿಂಬೆ- ಎಂಟು ಚಮಚ, ಮೊಳಕೆ ಮೆಂತೆ- ನಾಲ್ಕು ಚಮಚ, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಹಾಗಲಕಾಯಿಗೆ ಉಪ್ಪು ಬೆರೆಸಿದ ಹತ್ತು ನಿಮಿಷದ ನಂತರ ರಸ ತೆಗೆದು ಬದಿಗಿರಿಸಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಹಾಗಲಕಾಯಿಯನ್ನು ಹಾಕಿ, ಬಾಡಿಸಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ. ತೆಂಗಿನತುರಿಗೆ ಕೊತ್ತಂಬರಿಸೊಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ ನೀರು ಸೇರಿಸದೆ ಪುಡಿ ಮಾಡಿ ಮಿಕ್ಸಿಂಗ್ ಬೌಲ್‌ಗೆ ಸೇರಿಸಿ. ನಂತರ, ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ, ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.
ಹಾಗಲಕಾಯಿ ಚಿಪ್ಸ್ಬೇಕಾಗುವ ಸಾಮಗ್ರಿ: ಹಾಗಲಕಾಯಿ- ಎರಡು, ನನೆಸಿದ ಬೆಳ್ತಿಗೆ ಅಕ್ಕಿ- ಒಂದು ಕಪ್, ಕೆಂಪು ಮೆಣಸು- ಐದು, ಹುಣಸೆಹಣ್ಣು- ಎರಡು ಚಮಚ, ಧನಿಯಾ- ಒಂದು ಚಮಚ, ಜೀರಿಗೆ- ಅರ್ಧ ಚಮಚ, ಇಂಗು- ಒಂದು ಚಮಚ, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಬಿಲ್ಲೆಯಾಕಾರದಲ್ಲಿ ಹೆಚ್ಚಿ ಉಪ್ಪು ಬೆರೆಸಿ ಹತ್ತು ನಿಮಿಷ ಬಿಟ್ಟು, ಇದರಲ್ಲಿಯ ಕಹಿನೀರು ಬೇರ್ಪಡಿಸಿ. ಅಕ್ಕಿಗೆ ಮೆಣಸು, ಧನಿಯ, ಹುಣಸೆ, ಇಂಗು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ, ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ, ತೆಗೆದಿರಿಸಿದ ಹಾಗಲಕಾಯಿಯನ್ನು ಇದರಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಚಿಪ್ಸ್ ಕರಿಯಿರಿ. ಬಹಳ ರುಚಿಯಾಗಿದ್ದು, ಊಟಕ್ಕೆ ಸಾಥ್‌ಕೊಡಬಲ್ಲದು. ಗೀತಸದಾ