Advertisement

ಪಣಜಿ: ವೆರ್ಣಾ ಪೊಲೀಸರ ಕಾರ್ಯಾಚರಣೆ… ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ

07:09 PM Jul 06, 2023 | Team Udayavani |

ಪಣಜಿ: ಗೋವಾದ ವೆರ್ಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಸ್ಕೂಟರ್ ಕಳ್ಳನನ್ನು ಬಂಧಿಸಿದ್ದಾರೆ. ಸೊಹೈಲ್ ಫಿರೋಜ್ ಶೇಖ್ (19 ವರ್ಷ, ಕರ್ನಾಟಕ), ಬಲರಾಮ್ ಶಂಕದ್ ದಾಸ್ (22 ವರ್ಷ, ಪಶ್ಚಿಮ ಬಂಗಾಳ) ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವೆರ್ಣಾ ಪೋಲಿಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿಗಳು  ಪ್ರಸ್ತುತ ವೆರ್ಣಾದಲ್ಲಿ ವಾಸಿಸುತ್ತಿದ್ದರು. ವಿವಿಧೆಡೆ ಮೂರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು. 2 ಆಕ್ಸೆಸ್ ಮತ್ತು 1 ಆಕ್ಟಿವಾ. ಈ ಮೂರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸಿದ್ದರು. ಅದಕ್ಕಾಗಿ ವೆರ್ಣಾ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದರು. ಪೊಲೀಸರು ಬಲೆ ಬೀಸಿ ಶಂಕಿತ ಕಳ್ಳರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇವರಿಂದ ಇತರ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಎ ಕುತ್ಕೋ ಮಾರಾಯ..!;ಕಲಾಪದಲ್ಲಿ ಎಡವಟ್ಟು ಮಾಡಿದ ಪ್ರದೀಪ್ ಈಶ್ವರ್ ಗೆ ಸ್ಪೀಕರ್

Advertisement

Udayavani is now on Telegram. Click here to join our channel and stay updated with the latest news.

Next