Advertisement

ರೈತರ ಸಾಲಮನ್ನಾ ಅರ್ಜಿಗಳ ಪರಿಶೀಲನೆ

07:47 AM Jan 12, 2019 | |

ಹೊನ್ನಾಳಿ: ಕೃಷಿ ಪತ್ತಿನ ಸಹಕಾರ ಸಂಘದಲ್ಲಿರುವ ಸಾಲಮನ್ನಾ ದಾಖಲೆಗಳನ್ನು ತಾಲೂಕು ಮಟ್ಟದ ಕಮಿಟಿಯಲ್ಲಿ ಶುಕ್ರವಾರ ಪರಿಶೀಲಿಸಲಾಯಿತು. ತಾಲೂಕಿನ 32 ಸಹಕಾರಿ ಸಂಘದಲ್ಲಿರುವ 14,760 ರೈತರ ಸಾಲ ಮನ್ನಾ ಅರ್ಜಿಗಳನ್ನು ತಹಶೀಲ್ದಾರ್‌ ತುಷಾರ್‌ ಬಿ ಹೊಸೂರ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಯಿತು. ಕ್ರಮಬದ್ಧವಾಗಿರದ ರೈತರ ದಾಖಲೆಗಳನ್ನು ಮತ್ತೆ ತರಿಸಿಕೊಂಡು ಅವುಗಳನ್ನು ಸಾಲಮನ್ನಾದ ತಂತ್ರಾಂಶದಲ್ಲಿ ಭರ್ತಿ ಮಾಡಿ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.

Advertisement

14,760 ರೈತರ ಸಾಲ ಮನ್ನಾದ ದಾಖಲೆಗಳಲ್ಲಿ ಸಮರ್ಪಕವಾಗಿರದ 2,300 ರೈತರ ದಾಖಲೆಗಳನ್ನು ಮತ್ತೆ ತರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟ ನಂತರ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲಮನ್ನಾದ ಅರ್ಜಿಗಳನ್ನು ಕೂಡ ಪರಿಶೀಲಿಸಿ ತಂತ್ರಾಂಶದಲ್ಲಿ ಭರ್ತಿ ಮಾಡಿ ಕಳುಹಿಸಲಾಗುವುದು ಎಂದು ವಿವರಿಸಿದರು. ರೈತರು ಅಧಿಕಾರಿಗಳು ಕೇಳುವ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು ಎಂದು ಅವರು ಕೋರಿದರು. ಉಪತಹಶೀಲ್ದಾರ್‌ ನಂದ್ಯಪ್ಪ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎಚ್.ಎಸ್‌. ಸತೀಶ್‌, ನಿರೀಕ್ಷಕರಾದ ಮಂಜುನಾಥ್‌, ಮೇಲ್ವಿಚಾರಕರಾದ ಸುರೇಶ್‌, ವಿಜಯಕುಮಾರ್‌, ಲೋಕೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next