Advertisement

ಮೋದಿ ಕೊಂಡಾಡಿದ ದರ್ಶನ್‌

07:56 AM Jan 30, 2018 | Team Udayavani |

ಮೈಸೂರು: ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಬಗ್ಗೆ ತಾವು ಬರೆದ ಪತ್ರವನ್ನು ಪ್ರಧಾನಿ ಮೋದಿ ತಮ್ಮ ಮನ್‌ ಕಿ ಬಾತ್‌
ನಲ್ಲಿ ಪ್ರಸ್ತಾಪಿಸಿರುವುದಕ್ಕೆ ಮೈಸೂರಿನ ದರ್ಶನ್‌ ಹರ್ಷಚಿತ್ತರಾಗಿದ್ದಾರೆ. ಮೈಸೂರಿನ ಬಿಎಂಶ್ರೀ ನಗರ ನಿವಾಸಿ ಅರ್ಚಕ ಪುರುಷೋತ್ತಮ್‌ ಅವರ ಏಕೈಕ ಪುತ್ರ ದರ್ಶನ್‌. ಬೆಂಗಳೂರಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಲಿ.ನಲ್ಲಿ ಉದ್ಯೋಗಿ. ಅರ್ಚಕರಾಗಿದ್ದ 70 ವರ್ಷದ ವಯೋವೃದ್ಧ ತಂದೆ ಪುರುಷೋತ್ತಮ್‌ ಅವರಿಗೆ 7 ವರ್ಷಗಳ ಹಿಂದೆ ಪಾರ್ಶ್ವವಾಯು ತಗುಲಿದ ಪರಿಣಾಮ ಅದರ ಚಿಕಿತ್ಸೆವಾಗಿ ಪ್ರತಿ ತಿಂಗಳೂ ಸುಮಾರು 6 ಸಾವಿರ ರೂ. ಮೊತ್ತದ ಔಷಧಗಳನ್ನು ಖರೀದಿಸಬೇಕಿತ್ತು.

Advertisement

ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ದರ್ಶನ್‌, ವಾರಕ್ಕೊಮ್ಮೆ ಮೈಸೂರಿಗೆ ಬಂದು ಹೋಗುತ್ತಾರೆ. ಹೀಗಿರುವಾಗ ಬೆಂಗಳೂರಿನ ಎನ್‌. ಆರ್‌.ಕಾಲೋನಿಯಲ್ಲಿ ತಮ್ಮ ಮಗಳಿಗೆ ಪಲ್ಸ್‌ ಪೋಲಿಯೋ ಹನಿ ಹಾಕಿಸಲು ಹೋದಾಗ ಔಷಧ ಅಂಗಡಿಯ ಮುಂದೆ ಜನರು ಸಾಲುಗಟ್ಟಿ ನಿಂತಿರುವುದನ್ನು ಕಂಡು ಅಚ್ಚರಿಯಿಂದ ಈ ಬಗ್ಗೆ ವಿಚಾರಿಸಿದ ದರ್ಶನ್‌ ಅವರಿಗೆ ಪ್ರಧಾನಮಂತ್ರಿ ಜನೌಷಧ ಕೇಂದ್ರದ ಬಗ್ಗೆ ಮಾಹಿತಿ ದೊರೆತಿದೆ. ಕೂಡಲೇ ಅಂತಜಾìಲದಲ್ಲಿ ಹೆಚ್ಚಿನ ಮಾಹಿತಿ ಪಡೆದು ತಾವೂ ಕೂಡ ಪ್ರಧಾನಮಂತ್ರಿ ಜನೌಷಧ ಕೇಂದ್ರಕ್ಕೆ ಹೋಗಿ ತಮ್ಮ ತಂದೆಗೆ ಬೇಕಾದ ಔಷಧಗಳನ್ನು ಖರೀದಿಸುತ್ತಾರೆ.

ದುಷ್ಪರಿಣಾಮವಿಲ್ಲ: ಅಚ್ಚರಿ ಎಂದರೆ ಪ್ರತಿ ತಿಂಗಳು 6 ಸಾವಿರ ರೂ ನೀಡಿ ಖರೀದಿಸುತ್ತಿದ್ದ ಔಷಧಗಳಿಗೆ ಜನೌಷಧ ಕೇಂದ್ರದಲ್ಲಿ 1500ರೂ.ಗಳಿಗೆ ದೊರಕುತ್ತಿದೆ. ಜನೌಷಧ ಕೇಂದ್ರಗಳಿಗೆ ಪ್ರಚಾರ ಇಲ್ಲ ಎನ್ನುವುದನ್ನು ಬಿಟ್ಟರೆ, ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಔಷಧಗಳ ಸೇವನೆಯಿಂದ ತಂದೆಗೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಹೋದಾಗ ಸಯ್ನಾಜಿರಾವ್‌ ರಸ್ತೆ, ಸರಸ್ವತಿ ಥಿಯೇಟರ್‌ ಬಳಿ, ಜಯನಗರಗಳಲ್ಲಿರುವ ಜನೌಷಧ ಕೇಂದ್ರಗಳಲ್ಲಿ ತಂದೆಗೆ ಬೇಕಾದ ಔಷಧಗಳನ್ನು ತೆಗೆದುಕೊಂಡು ಹೋಗುತ್ತೇನೆ. ವೈದ್ಯರು ಬರೆದ ಎಲ್ಲಾ ಔಷಧಗಳೂ ಒಂದೇ ಕೇಂದ್ರದಲ್ಲಿ ದೊರೆಯದಿದ್ದರೂ ಎಲ್ಲಾ ಔಷಧಗಳೂ ಜನೌಷಧ ಕೇಂದ್ರಗಳ ಮಳಿಗೆಯಲ್ಲೇ ದೊರೆಯುತ್ತವೆ ಎನ್ನುತ್ತಾರೆ ದರ್ಶನ್‌.

ವೃದ್ಧಿಯಾಗಲಿ: ಜನೌಷಧ ಕೇಂದ್ರಗಳ ಸಂಖ್ಯೆ ಹೆಚ್ಚಾಗಬೇಕು. ಜತೆಗೆ ಇದರ ಬಗ್ಗೆ ಹೆಚ್ಚಿನ ಪ್ರಚಾರ ದೊರೆತು, ಸಾರ್ವಜನಿ ಕರಲ್ಲಿ ಅರಿವು ಮೂಡಿಸುವ ಕೆಲಸವಾಗ ಬೇಕಿದೆ. ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳೆಂದರೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿರುತ್ತವೆ. ಇಲ್ಲವೇ ಬಿಪಿಎಲ್‌ ಪಡಿತರ ಚೀಟಿ ಇರಬೇಕು ಎನ್ನುತ್ತಾರೆ. ಆದರೆ, ಪ್ರಧಾನ ಮಂತ್ರಿ ಜನೌಷಧ ಕೇಂದ್ರದಲ್ಲಿ ಆ ರೀತಿಯ ಯಾವುದೇ ಕಟ್ಟುಪಾಡುಗಳಿಲ್ಲ. ಅಗತ್ಯವಿದ್ದ ಯಾರು ಬೇಕಾದರು ಇಲ್ಲಿ ಔಷಧ ಖರೀದಿಸಬಹುದು. ಇದು ಜನರಿಗೆ ಬಹು ಉಪಯೋಗಿ ಯೋಜನೆ ಎಂದರು.

ಸಂತಸವಾಗಿದೆ
ಹಿಂದೆಲ್ಲಾ ಪ್ರಧಾನಮಂತ್ರಿಯವರನ್ನು ಮಾತನಾಡಿಸುವುದಿರಲಿ, ಹತ್ತಿರದಿಂದ ನೋಡುವುದು ಕೂಡ ಕನಸಿನ ಮಾತೇ ಆಗಿತ್ತು. ಆದರೆ, ಮೋದಿ ಅವರು ಕೇವಲ ಹತ್ತು ದಿನಗಳ ಹಿಂದೆ ತಾನು ಬರೆದ ಪತ್ರದ ಬಗ್ಗೆ ತಮ್ಮ ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿರುವುದು ಸಂತಸ ಉಂಟುಮಾಡಿದೆ ಎಂದು ಖುಷಿ ಹಂಚಿಕೊಂಡರು ದರ್ಶನ್‌.

Advertisement

ನಾನೊಬ್ಬ ಸಾಮಾನ್ಯ ನಾಗರಿಕ. ದೇಶದ ಪ್ರಧಾನಿ ತಮ್ಮ ಮನದ ಮಾತಿನಲ್ಲಿ ನನ್ನ ಪತ್ರದ ಬಗ್ಗೆ ಪ್ರಸ್ತಾಪಿಸಿರುವುದು ಸಂತಸ ತಂದಿದೆ.
 ●ದರ್ಶನ

 ●ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next