Advertisement
ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾ ಭಿಷೇಕದ ಏಳನೇ ದಿನವಾದ ಬುಧವಾರದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನಗೈದರು.
Related Articles
Advertisement
ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕಸ್ವಾಮೀಜಿ, ಕಂಬದ ಹಳ್ಳಿ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಮೂಡು ಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಂಗಳೂರಿನ ಪದ್ಮಿನಿ ನಾಗರಾಜ್ ಉಪನ್ಯಾಸ ನೀಡಿದರು. ಮೂಡುಬಿದಿರೆ ನೋಟರಿ ಶ್ವೇತಾ ಜೈನ್ ನಿರ್ವಹಿಸಿದರು.
ಧರ್ಮಸ್ಥಳ ಕ್ಷೇತ್ರದಿಂದ ಇಂದಿನ ಸೇವೆಫೆ. 29ರಂದು ಯುಗಳ ಮುನಿಶ್ರೀಗಳಾದ ಪರಮಪೂಜ್ಯ 108 ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು ದಿನದ ಸಂಪೂರ್ಣ ಸೇವೆ ನೆರವೇರಿಸುವರು. ಮೂಡುಬಿದಿರೆ ಜನಮಠದ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಕಾರ್ಕಳ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಪೂಜಾಕತೃìಗಳಿಂದ ಬೆಳಗ್ಗೆ 8ಕ್ಕೆ ಕೇವಲ ಜ್ಞಾನ ಕಲ್ಯಾಣ ಆಹಾರ ವಿಧಿ ನಡೆದು ಸಮವಸರಣ ಪೂಜೆ ನೆರವೇರುವುದು. ಸಾಂಸ್ಕೃತಿಕ ಕಾರ್ಯಕ್ರಮ
ಮುಖ್ಯ ವೇದಿಕೆಯಲ್ಲಿ ರಾತ್ರಿ 7.30ರಿಂದ 9.30ರ ವರೆಗೆ ಉಜಿರೆ ಎಸ್‌ಡಿಎಂ ಕಲಾ ಕೇಂದ್ರದಿಂದ ಕಲಾವೈಭವ ನೆರವೇರುವುದು. ರಾತ್ರಿ 9.30ರಿಂದ 11.30ರ ವರೆಗೆ ಕಾರ್ಕಳ ಶ್ರೀ ಲಲಿತಕೀರ್ತಿ ಯಕ್ಷಗಾನ ಕಲಾ ಮಂಡಳಿಯಿಂದ ಕಮಠೊಪಸರ್ಗ ವಿಜಯ ಯಕ್ಷಗಾನ ನಡೆಯುವುದು. ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7ರಿಂದ 8.30ರ ವರೆಗೆ ಸ್ಫೂರ್ತಿ ಭಟ್ ಗುಂಡೂರಿ ಬಳಗದವರಿಂದ ಭಕ್ತಿಗೀತೆ – ಭಾವಗೀತೆ, 8.30ರಿಂದ 11ರ ವರೆಗೆ ವೇಣೂರು ಶಿವಾಂಜಲಿ ಡ್ಯಾನ್ಸ್ ಇನ್‌ಸ್ಟಿಟ್ಯೂಟ್‌ನಿಂದ ನೃತ್ಯ ಪ್ರದರ್ಶನ ನಡೆಯಲಿದೆ.