Advertisement

ಮಹಿಳಾ ಮೋರ್ಚಾದಿಂದ ವೇಣು ಗೋ-ಬ್ಯಾಕ್‌ ಪ್ರತಿಭಟನೆ

12:55 PM Oct 17, 2017 | Team Udayavani |

ಧಾರವಾಡ: ಲೈಂಗಿಕ ಆರೋಪ ಹೊತ್ತಿರುವ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರು ಮರಳಿ ಹೋಗುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಸೋಮವಾರ ಪ್ರತಿಭಟನೆ ನಡೆಸಿತು. 

Advertisement

ಇಲ್ಲಿನ ಕೊಂಡವಾಡ ಓಣಿಯ ಮನೆ ಮೆನೆಗೆ ಕಾಂಗ್ರೆಸ್‌ ಪ್ರಚಾರ ಪರಿಶೀಲನೆಗಾಗಿ ಆಗಮಿಸಿದ್ದ ವೇಣುಗೋಪಾಲ ಅವರ ವಿರುದ್ಧ, ವೇಣುಗೋಪಾಲ ಗೋ ಬ್ಯಾಕ್‌ (ಮರಳಿ ಹೋಗಿ) ಎಂದು ಘೋಷಣೆ ಕೂಗಿದ ಮಹಿಳಾ ಬಿಜೆಪಿ ಕಾರ್ಯಕರ್ತೆಯರು, ಲೈಂಗಿಕ ಆರೋಪ ಹೊತ್ತಿರುವ ವ್ಯಕ್ತಿ ಧಾರವಾಡದ ಮನೆಗಳಿಗೆ ಹೋಗಿ ತಮ್ಮ ಪಕ್ಷದ ಸಾಧನೆ ಪ್ರಚಾರ ಮಾಡುತ್ತಿದ್ದಾರೆ.

ಅವರಿಗೆ ಈ ನೈತಿಕತೆ ಇಲ್ಲ. ಹೀಗಾಗಿ ಕೂಡಲೇ ಅವರು ವಾಪಸ್‌ ಹೋಗಬೇಕು ಎಂದು ಘೋಷಣೆಗಳನ್ನು ಕೂಗಿದರು. ಕೊಂಡವಾಡ ಓಣಿಯ ಒಂದು ಬದಿಯಲ್ಲಿ ಈ ಹೋರಾಟ ನಡೆಯುತ್ತಿದ್ದನ್ನು ಸೂಕ್ಷ್ಮವಾಗಿ ಅವಲೋಕಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ವೇಣುಗೋಪಾಲ ಅವರನ್ನು ಓಣಿಯ ಆ ತುದಿಯ ಮನೆಗಳಿಗೆ ಕರೆದುಕೊಂಡು ಹೋಗಿ ಮನೆ ಮನೆಗೆ ಭೇಟಿ ಮಾಡಿಸಿದರು.

ಇದರಿಂದ ಇನ್ನಷ್ಟು ಕೋಪಗೊಂಡ ಕಾರ್ಯಕರ್ತರು ವೇಣುಗೋಪಾಲ ವಿರುದ್ಧ ಘೋಷಣೆ ಕೂಗಿದರು. 

Advertisement

Udayavani is now on Telegram. Click here to join our channel and stay updated with the latest news.

Next