Advertisement
ಮಣಿಪಾಲ: ಕೋವಿಡ್ ವೈರಾಣು ಶ್ವಾಸಕೋಶವನ್ನು ಆವರಿಸಿದಾಗ ತೀವ್ರವಾಗಿ ಸಮಸ್ಯೆಯಾಗುವುದು ಉಸಿರಾಟಕ್ಕೆ. ಜಗತ್ತಿನಾದ್ಯಂತ ಇಂತಹ ಸಮಸ್ಯೆ ಇದ್ದ ರೋಗಿಗಳನ್ನು ಉಳಿಸಲು ವೈದ್ಯರು ವೆಂಟಿಲೇಟರ್ ಇಡುತ್ತಾರೆ. ಅರ್ಥಾತ್ ಉಸಿರಾಟಕ್ಕೆ ಪೂರಕವಾಗುವಂತೆ ಆಮ್ಲಜನಕ/ಕೃತಕ ಉಸಿರಾಟದ ವ್ಯವಸ್ಥೆ. ತುರ್ತು ನಿಗಾಘಟಕದಲ್ಲಿರುವ ರೋಗಿಗಳಿಗೆ ವೆಂಟಿಲೇಟರ್ ಅಗತ್ಯ.
ಕೋವಿಡ್ ರೋಗ ತೀವ್ರವಾದ ಸಂದರ್ಭ ಅದು ಶ್ವಾಸಕೋಶದ ಅಂಗಾಶಯಗಳನ್ನು ಹಾನಿ ಮಾಡುತ್ತದೆ. ಇದರಿಂದಾಗಿ ರಕ್ತಕ್ಕೆ ಆಮ್ಲಜನಕ ನೀಡುವುದು ಸಾಧ್ಯವಾಗುವುದಿಲ್ಲ. ನ್ಯುಮೋನಿಯಾ ಕೂಡ ಶುರುವಾಗಬಹುದು. ಅಲ್ಲದೇ ಕೆಲವೊಂದು ತೀವ್ರ ರೋಗಬಾಧೆಯ ಸಂದರ್ಭ ಇಡೀ ಶ್ವಾಸಕೋಶ ವ್ಯವಸ್ಥೆಯೇವಿಫಲವಾಗಬಹುದು. ಅಲ್ಲದೆ ಇದು ಇತರ ಅಂಗಾಂಗಳು ವಿಫಲವಾಗಲೂ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಇರುವುದೇ ಕೃತಕ ಉಸಿರಾಟ ವ್ಯವಸ್ಥೆ. ಇದು ಒಂದು ತಾಂತ್ರಿಕ ವ್ಯವಸ್ಥೆಯಾಗಿದ್ದು, ರೋಗಿ ಗಂಟಲಿನ ಮೂಲಕ ನಳಿಕೆಯೊಂದನ್ನು ಹಾಕಿ ಆಮ್ಲಜನಕವನ್ನು ನೇರವಾಗಿ ಶ್ವಾಸಕೋಶಕ್ಕೆ ನೀಡಲಾಗುತ್ತದೆ. ವೆಂಟಿಲೇಟರ್ ರೋಗಿಯ ದೇಹದ ಸಾಮಾನ್ಯ ಉಷ್ಣತೆಗೆ ಪೂರಕವಾಗಿ ಉಷ್ಣ ಮತ್ತು ತೇವಾಂಶವನ್ನು ಆಮ್ಲಜನಕದೊಂದಿಗೆ ನೀಡುತ್ತದೆ. ತೀವ್ರತರವಾದ ಉಸಿರಾಟದ ಸಮಸ್ಯೆ ಇಲ್ಲದ ರೋಗಿಗಳಿಗೆ ಶ್ವಾಸಕೋಶಕ್ಕೆ ನಳಿಕೆಯನ್ನು ಹಾಕದೆ ಮುಖಕ್ಕೆ ಮಾಸ್ಕ್ ರೀತಿಯ ಸಾಧನ ಅಥವಾ ಮೂಗಿಗೆ ಪುಟ್ಟ ನಳಿಕೆ ಅಳವಡಿಸಿ ಆಮ್ಲಜನಕ ನೀಡಲಾಗುತ್ತದೆ.
Related Articles
Advertisement
ವೆಂಟಿಲೇಟರ್‌ಗೆ ಎಷ್ಟು ದರ ಉತ್ತಮ ಕಂಪೆನಿಯ ವೆಂಟಿಲೇಟರ್‌ಗೆ ಸುಮಾರು 4 ಲಕ್ಷ ರೂ. ಮೇಲ್ಪಟ್ಟು ಬೆಲೆಇದೆ. ಪ್ರತಿ ಬಾರಿ ರೋಗಿಗೆ ಅಳವಡಿಸುವಾಗ ಇದರ ಪೈಪ್‌ಗ್ಳನ್ನು ಬದಲಾಯಿಸಬೇಕು. ವೆಂಟಿಲೇಟರ್‌ಗೆ ಸಮರ್ಪಕ ಆಮ್ಲಜನಕ ಸಿಲಿಂಡರ್ ಪೂರೈಕೆಯೂ ಆಗುತ್ತಿರಬೇಕು. ಅಮೆರಿಕಕ್ಕೆ ಬೇಕು 9 ಲಕ್ಷ ವೆಂಟಿಲೇಟರ್!
ಅಮೆರಿದಕಲ್ಲಿ ಸದ್ಯ 2 ಲಕ್ಷ ವೆಂಟಿಲೇಟರ್‌ಗಳು ಇವೆ. ಇಲ್ಲಿಗೆ ಸುಮಾರು 9-10 ಲಕ್ಷ ವೆಂಟಿಲೇಟರ್‌ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.