Advertisement

ವೆಂಟಿಲೇಟರ್‌ ಸಮಸ್ಯೆಗೆ ಹೀಗೊಂದು ಪರಿಹಾರ

05:57 PM May 23, 2020 | sudhir |

ಬೋಸ್ಟನ್‌ : ವೆಂಟಿಲೇಟರ್‌ಗಳ ಕೊರತೆ ಎಲ್ಲ ದೇಶಗಳನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಮೂಲದವರನ್ನು ಒಳಗೊಂಡ ಸಂಶೋಧಕರ ತಂಡ ಅಮೆರಿಕದಲ್ಲಿ ರೋಗಿಗಳ ನಡುವೆ ವೆಂಟಿಲೇಟರ್‌ಗಳನ್ನು ಹಂಚಿಕೊಳ್ಳುವ ಹೊಸ ವಿಧಾನವನ್ನು ಕಂಡು ಹಿಡಿದಿದೆ. ಇದನ್ನು ತೀವ್ರ ಉಸಿರಾಟದ ತೊಂದರೆಯಲ್ಲಿರುವ ಸೋಂಕಿತರಿಗೆ “ಕೊನೆಯ ದಾರಿ’ಯಾಗಿ ಬಳಸಬಹುದು ಎಂದು ಹೇಳಿದ್ದಾರೆ.

Advertisement

ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ) ಯ ಶ್ರೀಯಾ ಶ್ರೀನಿವಾಸನ್‌ ಸೇರಿ ಹಲವು ಸಂಶೋಧಕರು ತೀವ್ರವಾದ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿರುವವರಿಗೆ ವೆಂಟಿಲೇಟರ್‌ಗಳನ್ನು ಹಂಚಿಕೊಳ್ಳುವ ವಿಧಾನದ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಅತ್ಯಂತ ತುರ್ತು ಸಂದರ್ಭದಲ್ಲಿ ಎರಡು ಅಥವಾ ಹೆಚ್ಚಿನ ರೋಗಿಗಳನ್ನು ಒಂದೇ ವೆಂಟಿಲೇಟರ್‌ ಯಂತ್ರಕ್ಕೆ ಸಂಪರ್ಕಿಸಿ, ಏರ್‌ ಪೈಪ್‌(ಉಸಿರಾಟದ ಕೊಳವೆ)ಗಳನ್ನು ವಿಭಜಿಸುವುದರಿಂದ ಉಸಿರಾಟದ ಸಮಸ್ಯೆಯನ್ನು ನಿವಾರಿಸಬಹುದು ಎಂದು ಶ್ರೀನಿವಾಸನ್‌ ಹೇಳಿದ್ದಾರೆ. ತುರ್ತು ಸಮಯದಲ್ಲಿ ಮಾತ್ರ ಇದನ್ನು ಕೊನೆಯ ದಾರಿಯಾಗಿ ಬಳಸಬೇಕೆ ಹೊರತು ಎಲ್ಲ ಸಮಯದಲ್ಲಿ ಇದು ಉಪಯುಕ್ತವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next