ತಿರುಪತಿ: ತಿರುಪತಿಯ ವೆಂಕಟೇಶ್ವರ ದೇಗುಲದ ಆವರಣದಲ್ಲೂ ಮಂಗಳವಾರದಿಂದ ದೇವಸ್ಥಾನ ಪ್ರವೇಶಕ್ಕೆ ಟಿಕೆಟ್ ಸಿಗಲಿದೆ.
ಈ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ) ಕಾರ್ಯ ನಿರ್ವಾಹಕ ಅಧಿ ಕಾರಿ ಕೆ.ಎಸ್.ಜವಾಹರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಗೋವಾ ಚುನಾವಣೆ : ಶೇ 78.94% ಮತದಾನ, ಮಾರ್ಚ್ 10 ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಫೆ.15ರಿಂದ 10 ಸಾವಿರ ಸರ್ವದರ್ಶನ ಟಿಕೆಟ್ ನೀಡಲಾಗುತ್ತದೆ. ಅದರ ಜತೆಗೆ ಆನ್‌ಲೈನ್‌ನಲ್ಲಿ ಕೂಡ ಪ್ರತಿ ದಿನ 10 ಸಾವಿರ ಸರ್ವದರ್ಶನ ಟಿಕೆಟ್ ನೀಡಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ. ವೈ. ಸುಬ್ಟಾ ರೆಡ್ಡಿ ತಿಳಿಸಿದ್ದಾರೆ.