Advertisement

ಎನ್‌.ಎಸ್‌.ಹೆಗಡೆ ಅವರಿಗೆ ಕರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ

02:44 PM Feb 27, 2018 | |

 ಮುಂಬಯಿ: ಸಮಾಜದ  ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಾಧನೆಗೈದ ಕುಂದರಗಿ ಅವರು ನಿಜಕ್ಕೂ ಅಭಿನಂದನಾರ್ಹರು. ಸರಕಾರವೇ ಗುರುತಿಸುವಂತಹ ಕಾರ್ಯವನ್ನು ಇವರು  ಮಾಡಿದ್ದಾರೆ. ಹವ್ಯಕ ವೆಲ್ಫೆàರ್‌ ಕರ್ಕಿ ಪ್ರಶಸ್ತಿ ಮೂಲಕ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಮನುಷ್ಯ ಮೊದಲು ದ್ವೇಷವನ್ನು ತೊರೆಯಬೇಕು. ಲೋಕಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುವ ಮನಸ್ಸು ಮಾಡಬೇಕು. ಲೋಕದ ಏಳಿಗೆಯನ್ನೇ ಮುಖ್ಯ ಗುರಿಯಾಗಿಸಿ ಬದುಕಿ ಎಲ್ಲರನ್ನು ಪ್ರೀತಿಸುತ್ತಿರುವ  ಕುಂದರಗಿಯವರಂತಹ ಹಿರಿಯರು ಅಖಂಡ ಸಮಾಜದ ಹಿರಿಮೆಯಾಗಿದ್ದಾರೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯ, ಬಿಎಸ್‌ಕೆಬಿ ಅಸೋಸಿಯೇಶನ್‌   ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ತಿಳಿಸಿದರು.

Advertisement

ಫೆ. 25 ರಂದು ಬೆಳಗ್ಗೆ ಹವ್ಯಕ ವೆಲ್ಫೆàರ್‌ ಟ್ರಸ್ಟ್‌ ಮುಂಬಯಿ ಸಂಸ್ಥೆ ಘಾಟ್ಕೊàಪರ್‌ ಪಶ್ಚಿಮದ ಹವ್ಯಕ ಸಭಾಗೃಹದಲ್ಲಿ ನಡೆದ ಸಂಸ್ಥೆಯ  ವಾರ್ಷಿಕ “ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2018′ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಇವರು ಮಾತನಾಡಿದರು.

ಕರ್ನಾಟಕ ಮಲ್ಲ ದೈನಿಕದ ಸಹಯೋಗದೊಂದಿಗೆ ನಡೆಸಲ್ಪಟ್ಟ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಶಿವಕುಮಾರ್‌ ಪಿ. ಭಾಗವತ್‌ ಅಧ್ಯಕ್ಷತೆ ವಹಿಸಿದ್ದು ಗೌರವ ಅತಿಥಿಗಳಾಗಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಕೃಷಿ  ಮತ್ತು ಗ್ರಾಮೀಣ ಅಭಿವೃದ್ಧಿ ಮಂಡಳಿ ಸಲಹೆಗಾರ ಡಾ| ಆರ್‌. ಎನ್‌. ಬಂಡಿಮನೆ, ಟ್ರಸ್ಟ್‌ನ ಉಪಾಧ್ಯಕ್ಷ ಸಂಜಯ ಭಟ್‌, ಗೌರವ ಪ್ರಧಾನ ಕಾರ್ಯದರ್ಶಿ ನಾರಾಯಣ ಆರ್‌. ಅಕದಾಸ,  ಗೌರವ ಕೋಶಾಧಿಕಾರಿ ಎ. ಜಿ. ಭಟ್‌ ಉಪಸ್ಥಿತರಿದ್ದು   ವಾರ್ಷಿಕ  “ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ’ಯನ್ನು ಹಿರಿಯ ಪತ್ರಕರ್ತ, ಲೇಖಕ ಎನ್‌. ಎಸ್‌. ಹೆಗಡೆ ಕುಂದರಗಿ ಅವರಿಗೆ ಪ್ರದಾನಿಸಿ ಅಭಿನಂದಿಸಿ ಶುಭಹಾರೈಸಿದರು.

ನಿಷ್ಠಾವಂತ ಸೇವಾಕರ್ತರಿಗೆ ಅರ್ಹ ಗೌರವಗಳು ಸಲ್ಲಲೇ ಬೇಕು. ಇವು ಭಾವಿ ಜನಾಂಗಕ್ಕೆ ಮಾದರಿ ಆಗಲಿವೆ. ಕುಂದರಗಿ ಅವರು ಇಂತಹ ಘನತೆಗೆ ಸಲ್ಲುವವರು ಎಂದು ಅಭಿನಂದನಾ ಭಾಷಣದಲ್ಲಿ ಆರ್‌. ಎನ್‌. ಹೆಗಡೆ ತಿಳಿಸಿದರು. ಹವ್ಯಕ ಸಮಾಜಕ್ಕೆ ಕುಂದರಗಿ ಅವರ ಕೊಡುಗೆ ಬಹಳಷ್ಟಿದೆ. ಉತ್ತಮ ಗುರಿವುಳ್ಳವರಾದ ಕುಂದರಗಿ ಸಮಾಜದ ಎಲ್ಲರ ಅಭಿವೃದ್ಧಿಗೆ ಮುಂದಾದವರು. ಸಮಾಜ ಸೇವೆ, ಶಿಕ್ಷಣ, ಪತ್ರಿಕೋದ್ಯಮ  ಹೀಗೆ ಬಹುಮುಖ ಸಮಾಜ ಮುಖೀ ಕಾರ್ಯಗಳನ್ನು ಕೈಗೂಂಡು ಯಶಸ್ಸು ಪಡೆದಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಶಿವಕುಮಾರ್‌ ಪಿ. ಭಾಗವತ್‌ ಅವರು ನುಡಿದು ಶುಭಹಾರೈಸಿದರು.

ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.  ಟ್ರಸ್ಟ್‌ನ ಮುಖವಾಣಿ “ಹವ್ಯಕ ಸಂದೇಶ’ ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್‌.ಭಾಗವತ್‌ ಪ್ರಸ್ತಾವನೆಗೈದು ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ಜೀವನ ಚರಿತ್ರೆಯನ್ನು ಸ್ಥೂಲವಾಗಿ ವಿವರಿಸಿದರು.  ರೇಖಾ ಹೆಗಡೆ ಪ್ರಾರ್ಥನೆಗೈದರು. ಪ್ರಶಸ್ತಿ ಸಮಿತಿಯ ಸಂಚಾಲಕಿ ತನುಜಾ ಹೆಗಡೆ ಸ್ವಾಗತಿಸಿದರು.  ಪೂರ್ಣಿಮಾ ಅಕದಾಸ ಸಮ್ಮಾನ ಪತ್ರ ವಾಚಿಸಿದರು. ಉಮೇಶ್‌ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಹವ್ಯಕ ಸಂದೇಶ  ಮಂಡಳಿ ಸದಸ್ಯೆ ಹಾಗೂ ಶೈಲಜಾ ಹೆಗಡೆ, ಪೂರ್ಣಿಮಾ ಅವರು  ಶುಭ ಸಂದೇಶ‌ಗಳನ್ನು ವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಿ. ಎಂ. ಜೋಶಿ ವಂದಿಸಿದರು.  ನೃತ್ಯ ವಿದ್ಯಾಲಯದ ಕಲಾವಿದೆಯರು ಗುರು ಶೈಲಜಾ ಮಧುಸೂದನ ನಿರ್ದೇಶನದಲ್ಲಿ ನೃತ್ಯರೂಪಕ, ವೆಲ್ಫೆàರ್‌ ಟ್ರಸ್ಟ್‌ನ ಸದಸ್ಯರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ನಂತರ ಜಾನಪದ ಹಾಡುಗಳ ಸಮೂಹ ಗಾಯನ ಸ್ಪರ್ಧೆ ನಡೆಯಿತು. 

Advertisement

ಸಾರ್ವಜನಿಕ ಕ್ಷೇತ್ರದಲ್ಲಿ ನಾನು ತೋಡಗಿಸಿಕೊಳ್ಳಲು ಸಾಹಿತ್ಯಕ, ಸಾಂಸ್ಕೃತಿಕ ಆಸಕ್ತಿ ಇದ್ದುದರಿಂದ ಸಾಧ್ಯವಾಗಿದೆ. ಆವಾಗ ಇಡಿ ಜಿಲ್ಲೆಯಲ್ಲಿ 5 ಹೈಸ್ಕೂಲ್‌  ಮಾತ್ರವಿತ್ತು. ಪ್ರಾಥಮಿಕ ಶಾಲೆಯು ಹೆಚ್ಚಾಗಿರಲಿಲ್ಲ. ಸಂಯುಕ್ತ ಕರ್ನಾಟಕದಲ್ಲಿ ನಾನು ಕೆಲವು ಕಾಲ ಪತ್ರಕರ್ತನಾಗಿದ್ದೆ. ಅದನ್ನು ಬಿಟ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಮನಸ್ಸು ಮಾಡಿದೆ. ಇಂದು ಗ್ರಾಮಾಂತರ ಪ್ರದೇಶಗಳು ಖಾಲಿಯಾಗಿ ಪಟ್ಟಣ ಬೆಳೆಯುತ್ತಿವೆೆ. ಇದು ನಾನು ಗಮನಿಸಿದ ಸಮಕಾಲೀನ ಚಿತ್ರಣ. ಇದು ಕಾಲಕ್ಕಾನುಗುಣವಾದ ಪರಿವರ್ತನೆಯೂ ಹೌದು. ಇಲ್ಲಿ ಉದ್ಯೋಗ ಸೃಷ್ಟಿ ಆಗಬೇಕು. ನಾವು ಮೂಲಭೂತ ಆವಶ್ಯಕತೆಗೆ ಗೌರವ ನೀಡಬೇಕು. ಇದಕ್ಕೆ ಶೈಕ್ಷಣಿಕ ಅಭಿವೃದ್ಧಿಯೂ ಅಗತ್ಯ. ಮುಂದಿನ ಜನಾಂಗಕ್ಕೆ ನಮ್ಮ ಆದರ್ಶವನ್ನು ತೋರಿಸಬೇಕು. ಆಗಲೇ ಸಮಾಜದ ಅಭಿವೃದ್ಧಿ ಸಾಧ್ಯ. ಮುಂದಿನ ಸವಾಲುಗಳನ್ನು  ಎದುರಿಸುವ ಕಾರ್ಯ ಚಟುವಟಿಕೆ ಸಮಾಜಕ್ಕೆ ನಾವೂ ಮಾಡಬೇಕಾಗಿದೆ. ಹವ್ಯಕ ಸಮಾಜ ಶಕ್ತಿಯುತ ಸಮಾಜ. ಮುಂಬಯಿ ಹವ್ಯಕರು ಅದನ್ನು ಸಾಧಿಸಿ ತೋರಿಸಿದ್ದಾರೆ. ನನ್ನ ಸಾರ್ವಜನಿಕ ಕೆಲಸಕ್ಕೆ ಮುಂಬಯಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಪುರಸ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
– ಎನ್‌.ಎಸ್‌. ಹೆಗಡೆ, ಪ್ರಶಸ್ತಿ ಪುರಸ್ಕೃತರು 

ಚಿತ್ರ- ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next