Advertisement
ಶನಿವಾರ ಉಪರಾಷ್ಟ್ರಪತಿ ಆಯ್ಕೆಗೆ ಮತದಾನ ನಡೆದಿದ್ದು, ಲೋಕಸಭೆ ಮತ್ತು ರಾಜ್ಯಸಭೆಯ 771 ಮಂದಿ ಸದಸ್ಯರು ಮತ ಚಲಾಯಿಸಿದ್ದರು. ಈ ಪೈಕಿ ನಾಯ್ಡು ಅವರು 516 ಮತಗಳನ್ನು ಪಡೆದರೆ, ಗಾಂಧಿ ಅವರು 244 ಮತಗಳಿಗೆ ತೃಪ್ತಿ ಪಡಬೇಕಾಯಿತು. ಫಲಿತಾಂಶ ಪ್ರಕಟಗೊಂಡ ಬಳಿಕ ಮಾತನಾಡಿದ ನಾಯ್ಡು ಅವರು, “ಕೃಷಿ ಹಿನ್ನೆಲೆಯಿಂದ ಬಂದಿರುವ ನಾನು ಎಂದಿಗೂ ಈ ಹುದ್ದೆಗೇರುತ್ತೇನೆಂದು ಊಹಿಸಿರಲಿಲ್ಲ. ಪ್ರಧಾನಿ ಮೋದಿ, ಎಲ್ಲ ಪಕ್ಷಗಳ ನಾಯಕರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ. ಮೇಲ್ಮನೆಯ ಘನತೆಯನ್ನು ಎತ್ತಿಹಿಡಿಯುತ್ತೇನೆ ಎಂದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ, ವಿಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಅನೇಕರು ನಾಯ್ಡು ಅವರನ್ನು ಅಭಿನಂದಿಸಿದರು.
ವೆಂಕಯ್ಯ ನಾಯ್ಡುಗೆ ಸಿಕ್ಕಿದ್ದು- 516
ಗೋಪಾಲಕೃಷ್ಣ ಗಾಂಧಿಗೆ ಸಿಕ್ಕಿದ್ದು- 244
ಎಷ್ಟು ಅಂತರದ ಗೆಲುವು- 272
ಅಸಿಂಧುವಾದ ಮತಗಳು- 11 ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಬದ್ಧತೆ ಹಾಗೂ ಶ್ರದ್ಧೆಯಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ ಹಾಗೂ ರಾಷ್ಟ್ರ ನಿರ್ಮಾಣದ ನಿಲುವಿಗೂ ಬದ್ಧರಾಗಿರುತ್ತಾರೆ ಎಂಬ ನಂಬಿಕೆಯಿದೆ.
– ನರೇಂದ್ರ ಮೋದಿ, ಪ್ರಧಾನಿ