Advertisement
ಶಿಕಾಗೋದಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಮಾತನಾಡಿರುವ ಅವರು, “”ಸ್ವಾಮಿ ವಿವೇಕಾನಂದರಂಥ ಸಂತರು ಕಲಿಸಿದ ಹಿಂದುತ್ವದ ನೈಜ ಮೌಲ್ಯಗಳನ್ನು ಸಂರಕ್ಷಿಸುವ ಅಗತ್ಯತೆ ತುಂಬಾ ಇದೆ. ವಿವೇಕಾನಂದರದ್ದು ನಿಜವಾದ ಹಿಂದೂ ಪ್ರೇಮ. ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಅವರದ್ದು ಮೇರು ಕೊಡುಗೆ” ಎಂದು ಗುಣಗಾನ ಮಾಡಿದರು.
ಇದೇ ವೇಳೆ, ಇಲಿನಾಯ್ಸ ಗವರ್ನರ್ ಸೆ.11, 2018 ಅನ್ನು “ಸ್ವಾಮಿ ವಿವೇಕಾನಂದ ದಿನ’ ಎಂದು ಘೋಷಿಸಿದರು. ಮುಂದಿನ ವಿಶ್ವ ಹಿಂದೂ ಸಮ್ಮೇಳನ 2022ರ ನವೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯಲಿದೆ. ಬೆಳೆಯುತ್ತಿದೆ ಆರ್ಥಿಕತೆ
ಸಮ್ಮೇಳನದಲ್ಲಿ ಮಾತನಾಡಿದ ಮಣಿಪಾಲ್ ಗ್ಲೋಬಲ್‌ನ ನಿರ್ದೇಶಕ ಮಂಡಳಿ ಮುಖ್ಯಸ್ಥ ಮೋಹನ್ ದಾಸ್ ಪೈ, ಭಾರತ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶವಾಗಿದ್ದು, 2.6 ಲಕ್ಷಕೋಟಿ ಡಾಲರ್‌ನಷ್ಟು ಆರ್ಥಿಕತೆ ಹೊಂದಿದೆ. 2030ರ ವೇಳೆಗೆ ಭಾರತವು 10 ಲಕ್ಷಕೋಟಿ ಡಾಲರ್‌ನ ಆರ್ಥಿಕತೆಯಾಗಿ ಬೆಳೆಯಲಿದೆ. ಎಲ್ಲರಿಗೂ ಆಹಾರ, ವಸತಿ, ವಿದ್ಯುತ್, ನೀರು, ಆರೋಗ್ಯ ಮುಂತಾದ ಮೂಲಸೌಕರ್ಯಗಳು ಸಿಗಬೇಕು. 2030ರ ವೇಳೆಗೆ ಎಲ್ಲ ಸಮಸ್ಯೆಗಳಿಂದಲೂ ದೇಶ ಮುಕ್ತವಾಗಲಿದೆ ಎಂದರು. ಭಾಷಣದ ಆರಂಭದಲ್ಲಿ “ಎಲ್ಲರಿಗೂ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಹೇಳಿದ್ದು ವಿಶೇಷವಾಗಿತ್ತು.