Advertisement

ಮಂಗಳೂರಿನ ವೆನ್ಸಿಟಾ ಪ್ರಥಮ ರನ್ನರ್‌ ಅಪ್‌

12:36 AM Nov 18, 2019 | Sriram |

ಮಂಗಳೂರು: ಥಾಯ್ಲಂಡ್‌ನ‌ ಬ್ಯಾಂಕಾಕ್‌ನಲ್ಲಿ ನ. 16ರಂದು ನಡೆದ “ಮಿಸ್‌ ಟೀನ್‌ ವರ್ಲ್ಡ್ ಸೂಪರ್‌ ಮೋಡೆಲ್‌ -ಗ್ಲೋಬಲ್‌’ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಬೆಡಗಿ ವೆನ್ಸಿಟಾ ಡಯಾಸ್‌ ಪ್ರಥಮ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದ್ದಾರೆ.

Advertisement

ಬೆಂದೂರಿನ ಸೈಂಟ್‌ ಆ್ಯಗ್ನೆಸ್‌ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ (ವಿಜ್ಞಾನ ವಿಭಾಗ) ವಿದ್ಯಾರ್ಥಿನಿ ಆಗಿರುವ ವೆನ್ಸಿಟಾ ಅವರು ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ ಫ್ಯಾಶನ್‌ ಎಬಿಸಿಡಿ ಏರ್ಪಡಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್‌ ಟೀನ್‌ ಕರ್ನಾಟಕ- 2019 ಪ್ರಶಸ್ತಿಯನ್ನು ಮುಡಿಗೇರಿಸಿ ಬ್ಯಾಂಕಾಕ್‌ನಲ್ಲಿ ನಡೆವ ಅಂತಾರಾಷ್ಟ್ರೀಯ ಮಟ್ಟದ ಮಿಸ್‌ ಟೀನ್‌ ವರ್ಲ್ಡ್ ಸೂಪರ್‌ ಮೋಡೆಲ್‌ ಸ್ಪರ್ಧೆಗೆ ಅರ್ಹತೆ ಗಳಿಸಿದ್ದರು. ಅದಕ್ಕೂ ಮುನ್ನ ಅವರು ಮಿಸ್‌ ಮಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ್ದರು.

ಇಂಡೊ ಥಾಯ್‌ ಇಂಟರ್‌ನ್ಯಾಶನಲ್‌ ಫ್ರೆಂಡ್‌ಶಿಪ್‌ ಆ್ಯಂಡ್‌ ಕಲ್ಚರಲ್‌ ಎಕ್ಸ್‌ಚೇಂಜ್‌ ವತಿಯಿಂದ ಬ್ಯಾಂಕಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಏಶಿಯಾದ ವಿವಿಧ ದೇಶಗಳ 16 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಥಾಯ್ಲೆಂಡ್‌, ಆಫ್ರಿಕಾ, ಭಾರತ, ಅಮೆರಿಕ ದೇಶದವರಿದ್ದರು.

ಪ್ರಶ್ನೋತ್ತರ, ಪರಿಚಯ, ವ್ಯಕ್ತಿಗತ ಸಂದರ್ಶನದ ಬಳಿಕ ನಾಲ್ಕು ಸುತ್ತುಗಳ ಅಂದರೆ ರಾಷ್ಟ್ರೀಯ ಕಾಸ್ಟೂ Âಮ್‌, ಕಾನ್ಸೆಪ್ಟ್ ಕ್ಲೋತಿಂಗ್‌, ಬಿಕಿನಿ, ಸೆಲೆಬ್ರೇಶನ್‌, ಈವ್ನಿಂಗ್‌ ವೇರ್‌ ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು. ನ. 13ರಿಂದಲೇ ಗ್ರೂಮಿಂಗ್‌ ಆರಂಭವಾಗಿತ್ತು.

ಮಂಗಳೂರಿನ ನಾಗುರಿಯ ವಾಲ್ಟರ್‌ ಮತ್ತು ಜ್ಯೋತಿ ಡಯಾಸ್‌ ದಂಪತಿಯ ಪುತ್ರಿಯಾಗಿರುವ ವೆನ್ಸಿಟಾ ಅವರು ಪ್ರಸ್ತುತ ಎಬಿಸಿಡಿ ಸಂಸ್ಥೆಯಿಂದ ಮೋಡೆಲಿಂಗ್‌ ತರಬೇತಿ ಪಡೆಯುತ್ತಿದ್ದಾರೆ.

Advertisement

ವೆನ್ಸಿಟಾ ಬಾಲ್ಯದಿಂದಲೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದರು. 3ನೇ ತರಗತಿಯಲ್ಲಿದ್ದಾಗ ಆಂಜೆಲೋರ್‌ ಚರ್ಚ್‌ ಏರ್ಪಡಿಸಿದ್ದ “ಬಾಳ್‌ ಆಂಜ್‌’ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಆಂಜೆಲೋರ್‌ ಚರ್ಚ್‌ನ ವೈಸಿಎಸ್‌ ಸದಸ್ಯೆಯಾಗಿದ್ದು, ಹಾಡುಗಾರಿಕೆ, ನೃತ್ಯ, ಕಾರ್ಯಕ್ರಮ ನಿರ್ವಹಣೆ ಇತ್ಯಾದಿ ಬಹುಮುಖ ಪ್ರತಿಭಾನ್ವಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next