Advertisement
ಚೆಕ್ಪೋಸ್ಟ್ದ.ಕ. ಜಿಲ್ಲೆಯ ಕಲ್ಲುಗುಂಡಿ ಕೂಲಿಶೆಡ್ ಹಾಗೂ ಕೊಡಗು ಜಿಲ್ಲೆಯ ಗಡಿ ಪ್ರದೇಶ ಕೊಡಗು ಸಂಪಾಜೆ ಅರಣ್ಯ ತಪಾಸಣ ಚೆಕ್ ಪೋಸ್ಟ್ ಬಳಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಗ್ರಾ.ಪಂ. ನೇತೃತ್ವದಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಕಲ್ಲುಗುಂಡಿಯಲ್ಲಿ ಸುಳ್ಯದ ಇಲಾಖಾಧಿಕಾರಿಗಳು, ಕೊಡಗು ಸಂಪಾಜೆಯಲ್ಲಿ ಮಡಿಕೇರಿ ಇಲಾಖಾಧಿಕಾರಿಗಳು ಕರ್ತವ್ಯದಲ್ಲಿದ್ದಾರೆ.
ಉಭಯ ಜಿಲ್ಲೆಯಿಂದ ಸಂಚರಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕಲ್ಲುಗುಂಡಿ ಪೊಲೀಸ್ ಹೊರಠಾಣೆಯ ಬಳಿ ದ.ಕ. ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಪ್ರಯಾಣಿಸುವ ಪ್ರಯಾಣಿಕರ ಆರೋಗ್ಯ ತಪಾಸಣ ಕಾರ್ಯ ನಡೆಯುತ್ತಿದೆ. ಕೊಡಗು ಸಂಪಾಜೆ ಚೆಕ್‌ಪೋಸ್ಟ್ ಬಳಿಯೂ ಕೊಡಗು ಜಿಲ್ಲಾ ಆರೋಗ್ಯ ಕಾರ್ಯಕರ್ತೆಯರ ಮೂಲಕ ಆರೋಗ್ಯ ತಪಾಸಣೆ ನಡೆಸಿ, ಕೈಗೆ ಸೀಲ್ ಹಾಕಿ 14 ದಿನಗಳ ಕ್ವಾರಂಟೈನ್ ಇರುವಂತೆ ಸೂಚನೆ ನೀಡಲಾಗುತ್ತಿದೆ.