Advertisement

ಸೋಂಕಿತರ ನೆರವಿಗೆ ಉಚಿತ ವಾಹನ ಸೇವೆ

04:20 PM May 07, 2021 | Team Udayavani |

ಚಿಂತಾಮಣಿ: ತಾಲೂಕಿನ ಕೊರೊನಾಸೋಂಕಿತರಿಗೆ ನೆರವಾಗಲೆಂದು ಧರ್ಮಸ್ಥಳಗ್ರಾಮೀಣಾಭಿವೃದ್ಧಿ ಯೋಜನೆಯಿಂದ ನೀಡಿದತುರ್ತು ವಾಹನಕ್ಕೆ ಸಂಯುಕ್ತ ಜಿಲ್ಲಾ ನಿರ್ದೇಶಕ ಸಿ.ಎಸ್‌.ಪ್ರಶಾಂತ್‌ ಬುಧವಾರ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿ, ಧರ್ಮಸ್ಥಳಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಆದೇಶದ ಮೇರೆಗೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿತಲಾ ಎರಡರಂತೆ 350 ವಾಹನಗಳ ವ್ಯವಸ್ಥೆಮಾಡಿದ್ದು, ಚಿಂತಾಮಣಿ ತಾಲೂಕಿನಲ್ಲಿ ನಮ್ಮಸಂಸ್ಥೆಯ ವಾಹನವು ಕೊರೊನಾ ಸೋಂಕಿತರಿಗೆಲಭ್ಯಇರುತ್ತದೆ ಎಂದು ತಿಳಿಸಿದರು.

ಸಂಸ್ಥೆಯಿಂದ ನೀಡುವ ವಾಹನವುಪ್ರಮುಖವಾಗಿ ಸಾಮಾನ್ಯ ವರ್ಗದವರಿಗೆಮೀಸಲಾಗಿದ್ದು, ಸೇವೆ ಉಚಿತವಾಗಿದೆ. ಒಂದುವೇಳೆ ಕರೆ ಬರುವ ಸಮಯದಲ್ಲಿ ವಾಹನವು ಬೇರೆರೋಗಿಗಳ ಸೇವೆಯಲ್ಲಿ ತೊಡಗಿದ್ದರೆ, ಆದ್ಯತೆನೆಲೆಯಲ್ಲಿ ಮೊದಲು ಕರೆ ಬಂದವರಿಗೆ ಸೇವೆಲಭ್ಯವಿರುತ್ತದೆ ಎಂದು ಹೇಳಿದರು.

ಈ ವ್ಯವಸ್ಥೆಯು ರೋಗಿಯ ಪ್ರಯಾಣಕ್ಕೆಲಭ್ಯವಿದೆಯೇ ಹೊರೆತು, ಇದರಲ್ಲಿ ಆ್ಯಂಬುಲೆನ್ಸ್‌ಸೌಲಭ್ಯ ಇರುವುದಿಲ್ಲ, ತಾಲೂಕಿನಲ್ಲಿ ವಾಹನದಸೌಲಭ್ಯಕ್ಕಾಗಿ ಕ್ಷೇತ್ರಯೋಜನಾಧಿಕಾರಿ ಕೆ.ಶಾರಿಕದೂ.ಸಂ:9880048077, 8762534120ಸಂಪರ್ಕಿಸಬಹುದೆಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಸ್ವಾತಿ, ಕ್ಷೇತ್ರಯೋಜನಾಧಿಕಾರಿಗಳಾದ ಶಾರಿಕ, ಚಾಲಕರಾದಮಂಜುನಾಥ್‌, ರಾಜೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next