Advertisement

ಕೋವಿಡ್ ನಡುವೆಯೂ ವಾಹನ ನೋಂದಣಿ ಹೆಚ್ಚಳ

12:35 AM Feb 03, 2022 | Team Udayavani |

ಉಡುಪಿ: ಕೊರೊನಾ ಸಂಕಷ್ಟದ ನಡುವೆಯೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೊಸ ವಾಹನಗಳ ಖರೀದಿ ಹಾಗೂ ನೋಂದಣಿ ಹೆಚ್ಚಳವಾಗಿದೆ.

Advertisement

2020-21ರಲ್ಲಿ (ಮಾರ್ಚ್‌ ವರೆಗೆ) 19,424 ವಾಹನಗಳು ಉಡುಪಿ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದ್ದವು. 2021-22ರಲ್ಲಿ (2021ರ ಡಿಸೆಂಬರ್‌ ಅಂತ್ಯ) ಈಗಾಗಲೇ 11,202 ವಾಹನಗಳು ನೋಂದಣಿಯಾಗಿವೆ. ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ 2022ರಲ್ಲಿ 4,213, 2021ರಲ್ಲಿ 35,751, 2020ರಲ್ಲಿ 32,052 ವಾಹನಗಳು ನೋಂದಣಿ  ಯಾಗಿವೆ.

ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿ 2022ರಲ್ಲಿ 1,256, 2021ರಲ್ಲಿ 10,875 ಹಾಗೂ 2020ರಲ್ಲಿ 10,013 ನೋಂದಣಿಯಾಗಿವೆ.

ಬಂಟ್ವಾಳದಲ್ಲಿ  2022ರಲ್ಲಿ 772, 2021ರಲ್ಲಿ 6,299, 2020ರಲ್ಲಿ 6,103 ಈ ವರ್ಷದ ನೋಂದಣಿ ಪ್ರಕ್ರಿಯೆ ಈಗಷ್ಟೇ ಆರಂಭವಾಗಿರುವುದರಿಂದ ಇನ್ನಷ್ಟು ನೋಂದಣಿ ಯಾಗುವ ಸಾಧ್ಯತೆಯಿದೆ ಎಂದು ಆರ್‌ಟಿಒ ಅಧಿಕಾರಿ ಮಾಹಿತಿ ನೀಡಿದ್ದಾರೆ.

2021ರ ಮೇ ಮತ್ತು ಜೂನ್‌ನಲ್ಲಿ ಅತೀ ಕಡಿಮೆ ನೋಂದಣಿಯಾಗಿದೆ. ಈ ಎರಡು ತಿಂಗಳು ಹೊರತುಪಡಿಸಿ ಉಳಿದೆಲ್ಲ ತಿಂಗಳಲ್ಲಿ ಸರಾಸರಿ ಸಾವಿರಕ್ಕೂ ಅಧಿಕ ವಾಹನಗಳು ನೋಂದಣಿ ಯಾಗಿವೆ. ಕೊರೊನಾ ಲಾಕ್‌ಡೌನ್‌ ಹೊರತುಪಡಿಸಿ, ಉಳಿದ ತಿಂಗಳಲ್ಲಿ ವಾಹನ ನೋಂದಣಿ ಸರಾಸರಿಯಲ್ಲಿ ನಡೆದಿದೆ. ಸ್ಥಳೀಯವಾಗಿ ವಾಹನ ಖರೀದಿಯೂ ಹೆಚ್ಚಾಗಿದೆ.

Advertisement

ಅಡ್ಡಿಯಾಗದ ಕೊರೊನಾ
2019-20ರಲ್ಲಿ 4,774, 2020-21ರಲ್ಲಿ 4,840 ಹಾಗೂ 2021-22ರಲ್ಲಿ 4,005 ಲಘು ವಾಹನಗಳು ನೋಂದಣಿಯಾಗಿವೆ. ಕೊರೊನಾ ಕಾಲದಲ್ಲಿ ಹಲವು ರೀತಿಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಹೊಸ ವಾಹನ ಖರೀದಿ, ನೋಂದಣಿಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ.

ಸರಕುಗಳ ಸಾಗಾಟಕ್ಕೆ ಬಳಸುವ ವಾಹನಗಳ (ಬೃಹತ್‌ ವಾಹನ) ನೋಂದಣಿಯಲ್ಲೂ ಏರಿಕೆಯಾಗಿದೆ. 2020-21ರಲ್ಲಿ 1,729 ವಾಹನ ನೋಂದಣಿಯಾಗಿದ್ದರೆ, 2021-22ರಲ್ಲಿ ಈವರೆಗೆ 1,575 ವಾಹನ ನೋಂದಣಿಯಾಗಿದೆ. ಪ್ರತೀ ವರ್ಷ ಮೇ ಮತ್ತು ಜೂನ್‌ನಲ್ಲಿ ಹೊಸ ವಾಹನ ಖರೀದಿ ಹಾಗೂ ನೋಂದಣಿ ಕಡಿಮೆಯಿರುತ್ತದೆ. ಉಳಿದೆಲ್ಲ ತಿಂಗಳಲ್ಲಿ ನೋಂದಣಿ ಪ್ರಕ್ರಿಯೆ ಹೆಚ್ಚಿರು ತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಇದನ್ನೂ ಓದಿ:ಪ್ರತಿ ಮದುವೆಯೂ ಹಿಂಸಾತ್ಮಕ ಎನ್ನಲಾಗದು: ಸಚಿವೆ ಸ್ಮತಿ ಇರಾನಿ

2022ರ ಜ. 27ರ ಅಂತ್ಯಕ್ಕೆ ಈ ವರ್ಷ 134 ವಾಹನ ಸರೆಂಡರ್‌ ಆಗಿದೆ. ಇದರಲ್ಲಿ 21 ಬಸ್‌, 11 ಕ್ಯಾಬ್‌ ಸೇರಿಕೊಂಡಿವೆ. 2015-16ರಿಂದ ಇಲ್ಲಿಯವರೆಗೆ 329 ವಾಹನಗಳು ಸರೆಂಡರ್‌ ಆಗಿವೆ. ತೆರಿಗೆ ಬಾಕಿ ಇಟ್ಟುಕೊಂಡಿದ್ದ 558 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2.66 ಕೋಟಿ ರೂ. ತೆರಿಗೆ ಬರಬೇಕಿದ್ದು, 372 ವಾಹನ ಮಾಲಕರು 1.31 ಕೋಟಿ ರೂ. ತೆರಿಗೆ ಪಾವತಿಸಿದ್ದು, 186 ವಾಹನ ಮಾಲಕರಿಂದ 1.34 ಕೋಟಿ ರೂ. ತೆರಿಗೆ ಪಾವತಿಗೆ ಬಾಕಿಯಿದೆ.

ಎಲ್ಲಿ? ಎಷ್ಟು? ನೋಂದಣಿ
ಉಡುಪಿ ಆರ್‌ಟಿಒ
2020-21ರಲ್ಲಿ
(ಮಾರ್ಚ್‌ ವರೆಗೆ) 19,424
2021-22ರಲ್ಲಿ
(2021ರ ಡಿಸೆಂಬರ್‌ ಅಂತ್ಯ) 11,202

ಮಂಗಳೂರು ಆರ್‌ಟಿಒ
2020ರಲ್ಲಿ 32,052
2021ರಲ್ಲಿ 35,751
2022ರಲ್ಲಿ 4,213

ಪುತ್ತೂರು ಆರ್‌ಟಿಒ
2022ರಲ್ಲಿ 1,256
2021ರಲ್ಲಿ 10,875
2020ರಲ್ಲಿ 10,013

ಬಂಟ್ವಾಳ ಆರ್‌ಟಿಒ
2022ರಲ್ಲಿ 772
2021ರಲ್ಲಿ 6,299
2020ರಲ್ಲಿ 6,103

Advertisement

Udayavani is now on Telegram. Click here to join our channel and stay updated with the latest news.

Next