Road Mishap ಕುಂದಾಪುರ: ಪಿಕಪ್ ವಾಹನಕ್ಕೆ ಕಾರು ಢಿಕ್ಕಿ
Team Udayavani, Jan 14, 2025, 9:19 PM IST
ಕುಂದಾಪುರ: ಕಾವ್ರಾಡಿ ಗ್ರಾಮದ ಗಿರೀಶ ಅವರು ಚಲಾಯಿಸುತ್ತಿದ್ದ ಪಿಕಪ್ ವಾಹನಕ್ಕೆ ಕಾರು ಢಿಕ್ಕಿಯಾಗಿದೆ.
ಹೆದ್ದಾರಿಯಲ್ಲಿ ಕುಂದಾಪುರ-ಉಡುಪಿ ಏಕಮುಖ ರಸ್ತೆಯಲ್ಲಿ ಕೋಟ ಕಡೆಗೆ ಹೋಗುತ್ತಿರುವಾಗ ಕುಂಭಾಶಿ ಗ್ರಾಮದ ಕೊರವಡಿಯ ಹೊಟೇಲ್ ಎದುರು ತಲುಪುವಾಗ ತೆಕ್ಕಟ್ಟೆ ಕಡೆಯಿಂದ ಕುಂದಾಪುರ ಕಡೆಗೆ ರಘುವೀರ ಚಲಾಯಿಸಿಕೊಂಡು ಬಂದ ಕಾರು ಡಿವೈಡರ್ ಅನ್ನು ದಾಟಿ ವಿರುದ್ಧ ದಿಕ್ಕಿನಿಂದ ಬಂದು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಪರಿಣಾಮ ಎರಡು ವಾಹನಗಳೂ ಜಖಂ ಆಗಿವೆ. ಗಿರೀಶ ಹಾಗೂ ರಘುವೀರ ಅವರಿಗೆ ಗಾಯವಾಗಿದ್ದು, ಗಿರೀಶ್ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ, ರಘುವೀರ್ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.