Advertisement

ಚಾಲನೆ ಪರವಾನಿಗೆ ಸಹಿತ ವಾಹನ ದಾಖಲೆ ಮಾನ್ಯತೆ ಮಾ. 31ರ ವರೆಗೆ ವಿಸ್ತರಣೆ

02:15 AM Dec 28, 2020 | sudhir |

ಹೊಸದಿಲ್ಲಿ: ಚಾಲನೆ ಪರವಾನಿಗೆ ಸಹಿತ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯ ಅವಧಿಯನ್ನು 2021ರ ಮಾರ್ಚ್‌ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

2020ರ ಫೆ. 1ರಿಂದ ಮಾನ್ಯತೆಯ ಅವಧಿ ಮುಗಿದಿರುವ ದಾಖಲೆಗಳಿಗೆ ಮತ್ತು ಡಿ. 31ರ ವೇಳೆಗೆ ಅವಧಿ ಮುಗಿಯಲಿರುವ ವಾಹನ ಸಂಬಂಧಿ ದಾಖಲೆಗಳಿಗೆ ಇದು ಅನ್ವಯವಾಗಲಿದೆ. ಲಾಕ್‌ ಡೌನ್‌ ಕಾರಣ ವಾಹನ ಮಾಲಕರು ಅವಧಿ ಮುಗಿದಿದ್ದರೂ ಚಾಲನೆ ಪರವಾನಿಗೆ, ಫಿಟ್ನೆಸ್‌ ಸರ್ಟಿಫಿಕೆಟ್‌, ಪರ್ಮಿಟ್‌ ನವೀಕರಿಸಲು ಪರದಾಡುವಂತಾಗಿತ್ತು. ಹೀಗಾಗಿ ಸರಕಾರ ಅವುಗಳ ಮಾನ್ಯತೆಯನ್ನು ಎರಡನೇ ಬಾರಿ ವಿಸ್ತರಿಸಿದೆ. ಜನ ಜಂಗುಳಿಯಿಂದಾಗಿ ಸಾಂಕ್ರಾಮಿಕ ಪ್ರಸರಣದ ಅಪಾಯವಿದೆ ಎನ್ನುವ ಹಿನ್ನೆಲೆಯಲ್ಲಿ ಕೇಂದ್ರವು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next