Advertisement
ಹೇಗೆ ಬೆಲೆ ಇಳಿಕೆಯಾಗಲಿದೆ?ಹಲವು ಅಂಶಗಳನ್ನು ಗಮನಿಸಿ ಐಆರ್ ಡಿಎಐ ದೀರ್ಘಾವಧಿ ವಿಮೆಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ. 2018ರಲ್ಲಿ ಸರ್ವೋಚ್ಚ ನ್ಯಾಯಾಲಯ ಒಂದು ಆದೇಶ ನೀಡಿತ್ತು. ಹೊಸ ವಾಹನಗಳನ್ನು ಖರೀದಿಸುವಾಗ ಕಾರುಗಳ ಮೇಲೆ 3 ವರ್ಷ, ಬೈಕ್‌ಗಳ ಮೇಲೆ 5 ವರ್ಷದ ತೃತೀಯ ವ್ಯಕ್ತಿ ವಿಮೆ ಮಾಡಿಸುವುದು ಕಡ್ಡಾಯ ಅಂದಿತ್ತು. ಅಲ್ಲಿಂದ ವಿಮಾ ಕಂಪೆನಿಗಳು ದೀರ್ಘಾವಧಿಯ ವಿಮೆ ನೀಡಲು ಆರಂಭಿಸಿದವು. ಹಾಗೆಯೇ ಸಾಲ ನೀಡುವ ಕಂಪೆನಿಗಳೂ, ಸಮಗ್ರ ವಿಮೆಗಾಗಿ ಆಗ್ರಹಿಸಿದವು. ಇದರಿಂದ ಒಟ್ಟಾರೆ ವಾಹನದ ಬೆಲೆ ಏರಲು ಶುರುವಾಯಿತು. ಈ ಸಂಗತಿಯನ್ನು ಮುಖ್ಯವಾಗಿ ಐಆರ್‌ಡಿಎಐ ಪರಿಗಣಿಸಿದೆ. ಅದಕ್ಕಾಗಿಯೇ ಈ ರೀತಿಯ ವಿಮೆಯಲ್ಲಿ ಹಲವು ಬದಲಾವಣೆಗಳನ್ನೂ ಐಆರ್‌ಡಿಎಐ ಮಾಡಿದ್ದನ್ನು ಇಲ್ಲಿ ಗಮನಿಸಬಹುದು. ವಿಮಾ ಕಂಪೆನಿಗಳು ನೀಡುವ ಸೇವೆ ತೃಪ್ತಿಕರವಾಗಿಲ್ಲದಿದ್ದರೂ, ದೀರ್ಘಾ ವಧಿಯ ವಿಮೆ ಎಂಬ ಕಾರಣಕ್ಕೆ ಗ್ರಾಹಕರು ಸಹಿಸಿಕೊಳ್ಳುತ್ತಿದ್ದಾರೆ. ದೀರ್ಘಾವಧಿ ವಿಮೆ ರದ್ದಾಗುವಾಗ ಇದನ್ನೂ ಗಣನೆಗೆ ತೆಗೆದುಕೊಂಡಿದೆ. ಸದ್ಯದ ಲೆಕ್ಕಾಚಾರದಲ್ಲಿ ದೀರ್ಘಾವಧಿ ವಿಮೆ ರದ್ದಾಗಿರುವುದರಿಂದ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಾಹನಗಳು ಸಿಗುವ ನಿರೀಕ್ಷೆಯಿದೆ. ಕೋವಿಡ್ ಕಾಲದಲ್ಲೂ ವಾಹನ ಖರೀದಿಸಬಹುದೆಂಬ ಆಶಾವಾದವಿದೆ.