Advertisement

ಕಸ ಸುರಿದರೆ ವಾಹನ ಪರವಾನಗಿ ರದ್ದು

02:39 PM Jul 31, 2019 | Team Udayavani |

ತುಮಕೂರು: ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೆ ಕಸ ಸುರಿಯಲು ಯತ್ನಿಸಿದರೆ ಅಂತಹ ವಾಹನಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ಎಚ್ಚರಿಕೆ ನೀಡಿದರು.

Advertisement

ನಗರದ ಹೊರವಲಯದ ಗಾರೆ ನರಸಯ್ಯನಕಟ್ಟೆ ಹಾಗೂ ಅಕ್ಕತಂಗಿಯರ ಕೆರೆಯಂಗಳದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ 2 ಲಗೇಜ್‌ ಆಟೋಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದು 2 ಸಾವಿರ ರೂ.ದಂಡ ವಿಧಿಸಿದ್ದಾರೆಂದರು.

2 ಆಟೋ ವಶಕ್ಕೆ: ಇದೇ ರೀತಿ ಗಾರೆ ನರಸಯ್ಯನಕಟ್ಟೆ ಬಳಿ ಖಾಸಗಿ ಬ್ಯಾಂಕ್‌ವೊಂದರ ಸಿಬ್ಬಂದಿ ಲಗೇಜ್‌ ಆಟೋದಲ್ಲಿ ಪೇಪರ್‌ ಸೇರಿದಂತೆ ಇತರೆ ಕಸ ತುಂಬಿ ಕೊಂಡು ಬಂದು ಕಸ ಹಾಕಲು ಮುಂದಾ ಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಪಾಲಿಕೆ ಅಧಿಕಾರಿಗಳು, ದಾಳಿ ನಡೆಸಿ ಆಟೋ ವಶಪಡಿಸಿಕೊಂಡು ಎರಡೂ ಆಟೋಗಳನ್ನು ಪಾಲಿಕೆ ಕಚೇರಿಗೆ ಕರೆ ತಂದು ಆಯುಕ್ತರ ಮುಂದೆ ಹಾಜರು ಪಡಿಸಿದ್ದಾರೆ.

ಸ್ವಚ್ಛತೆ ಕಾಪಾಡಲು ಮುಂದಾಗಿ: ಎರಡೂ ಕಡೆ ಆಟೋಗಳಲ್ಲಿ ಕಸ ಸುರಿಯಲು ಬಂದಿದ್ದವರಿಗೆ ನಗರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಿದ ಆಯುಕ್ತ ಟಿ.ಭೂಬಾಲನ್‌, ತುಮಕೂರು ನಗರವನ್ನು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛ ತುಮಕೂರನ್ನಾಗಿ ಮಾ ಡಲು ಶ್ರಮಿಸಲಾಗುತ್ತಿದೆ. ಕಸವನ್ನು ಎಲ್ಲೆಂ ದರಲ್ಲಿ ಸ್ಥಳಗಳಲ್ಲಿ ಎಸೆಯಬಾರದು. ಸಾರ್ವ ಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದೆ ಅನೈರ್ಮಲ್ಯ ಸೃಷ್ಟಿಸುವ ರೀತಿಯಲ್ಲಿ ಕಸವನ್ನು ಎಸೆದರೆ ಅಂತಹವರಿಗೆ ದಂಡ ಹಾಕಲಾಗುವುದು ಎಂದರು.

ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವೆ: ರಸ್ತೆ, ಕೆರೆಯಂಗಳ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬಾರದು. ಒಂದು ವೇಳೆ ಪಾಲಿಕೆ ಆದೇಶ ಉಲ್ಲಂಘಿಸಿ ಕಸ ಹಾಕಿದರೆ ಅಂತಹ ವಾಹನ ಗಳಿಗೆ ಹೆಚ್ಚಿನ ಮೊತ್ತದಲ್ಲಿ ದಂಡ ವಿಧಿಸಿ, ವಾಹನಗಳ ಲೈಸೆನ್ಸ್‌ ರದ್ದುಪಡಿಸಲು ಜಿಲ್ಲಾಧಿ ಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು. ಗಾರೆ ನರಸಯ್ಯನಕಟ್ಟೆಗೆ ಖಾಸಗಿ ಬ್ಯಾಂಕ್‌ನವರು ಪೇಪರ್‌ ತುಂಬಿಕೊಂಡು ಕಸ ಹಾಕಲು ಬಂದಿದ್ದರು. ಅದೇ ರೀತಿ ಅಕ್ಕತಂಗಿ ಯವರ ಕೆರೆ ಬಳಿಗೆ ತರಕಾರಿ ತುಂಬಿಕೊಂಡು ಮತ್ತೂಂದು ವಾಹನ ಬಂದಿತ್ತು. ಈ ಎರಡೂ ವಾಹನವನ್ನು ಪಾಲಿಕೆ ಸಿಬ್ಬಂದಿ ಹಿಡಿದು ಪಾಲಿಕೆ ಆವರಣಕ್ಕೆ ಕರೆ ತಂದಿದ್ದರು. ಈ ಎರಡೂ ವಾಹನಗಳಿಗೆ ತಲಾ 2 ಸಾವಿರ ರೂ.ದಂಡ ವಿಧಿಸಿ, ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next